ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೆಲ್ಲಿಕಟ್ಟೆಯಲ್ಲಿ ಶಾಲಾ ಬಸ್ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಕಾರಿನ ಎದುರುಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ನೆಲ್ಲಿಕಟ್ಟ ಗುರುನಗರದಲ್ಲಿ ಶುಕ್ರವಾರ ಅಪಘಾತ ಸಂಭವಿಸಿದೆ. ಕಾರಿಗೆ ಡಿಕ್ಕಿ ಹೊಡೆದ ನಂತರ ಶಾಲಾಬಸ್ ರಸ್ತೆ ಅಂಚಿಗೆ ಸರಿದು ನಿಂತಿದೆ. ಭಾನುವಾರ ಪಳ್ಳತ್ತಡ್ಕದಲ್ಲಿ ನಡೆದ ಅಪಘಾತಕ್ಕೀಡಾದ ಮಾನ್ಯದ ಅದೇ ಖಾಸಗಿ ವಿದ್ಯಾ ಸಂಸ್ಥೆಗೆ ಸೇರಿದ ಇನ್ನೊಂದು ಬಸ್ ನೆಲ್ಲಿಕಟ್ಟೆಯಲ್ಲೂ ಅಪಘಾತಕ್ಕೀಡಾಗಿದೆ. ಪಳ್ಳತ್ತಡ್ಕದಲ್ಲಿ ನಡೆದಿದ್ದ ಅಪಘಾತದಲ್ಲಿ ಐವರು ಸಾವಿಗೀಡಾಗಿದ್ದರು.