ನವದೆಹಲಿ(PTI): ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆ (ಪಿಆರ್‌ಪಿ ಕಾಯ್ದೆ) ಉಲ್ಲಂಘಿಸಿದ ಸಂದರ್ಭದಲ್ಲಿ ಪ್ರಕಾಶಕರಿಗೆ ಹಾಗೂ ಮುದ್ರಣಾಲಯಗಳನ್ನು ನಡೆಸುವವರಿಗೆ ಇನ್ನು ಮುಂದೆ ಜೈಲು ವಿಧಿಸಲಾಗುವುದಿಲ್ಲ.
ನವದೆಹಲಿ(PTI): ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆ (ಪಿಆರ್‌ಪಿ ಕಾಯ್ದೆ) ಉಲ್ಲಂಘಿಸಿದ ಸಂದರ್ಭದಲ್ಲಿ ಪ್ರಕಾಶಕರಿಗೆ ಹಾಗೂ ಮುದ್ರಣಾಲಯಗಳನ್ನು ನಡೆಸುವವರಿಗೆ ಇನ್ನು ಮುಂದೆ ಜೈಲು ವಿಧಿಸಲಾಗುವುದಿಲ್ಲ.
ಹೊಸ 'ಜನ ವಿಶ್ವಾಸ ಕಾಯ್ದೆ'ಯು ಶುಕ್ರವಾರದಿಂದ (ಇಂದಿನಿಂದ) ಜಾರಿಗೆ ಬಂದಿದ್ದು, ಈ ಕುರಿತು ಕೇಂದ್ರ ಸರ್ಕಾರ ಗುರುವಾರ ಅಧಿಸೂಚನೆ ಪ್ರಕಟಿಸಿದೆ.
ಈ ಮೊದಲು, ಕಾಯ್ದೆ ಉಲ್ಲಂಘನೆ ಸಂದರ್ಭದಲ್ಲಿ ತಪ್ಪಿತಸ್ಥರಿಗೆ ಕಾಯ್ದೆಯ ಸೆಕ್ಷನ್ 12, 13 ಹಾಗೂ 14ರಡಿ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಕಾಯ್ದೆಯಲ್ಲಿನ ಈ ಅವಕಾಶಗಳನ್ನು ತೆಗೆದು ಹಾಕಲಾಗಿದೆ.
ತಪ್ಪು ಮಾಹಿತಿಗಳಿಂದ ಕೂಡಿದ ಮುದ್ರಣ, ಘೋಷಣಾ ಪತ್ರ ಇಲ್ಲದೆಯೇ ಮುದ್ರಣಾಲಯ ನಡೆಸುವುದು, ತಪ್ಪು ಘೋಷಣಾಪತ್ರ ಹೊಂದಿರುವುದು, ಅಸಮರ್ಪಕವಾಗಿ ಮಾಹಿತಿ ಪ್ರಕಟಿಸುವಂತಹ ನಡೆಗಳಿಗೆ ಇನ್ನು ಮುಂದೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.