ಕೋಝಿಕ್ಕೋಡ್: ನಿಪಾ ಸೋಂಕಿನ ಹಿನ್ನೆಲೆಯಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಕಂಟೈನ್‍ಮೆಂಟ್ ಝೋನ್‍ನಲ್ಲಿರುವ ಕಾಲೇಜುಗಳ ಪರೀಕ್ಷೆಗಳನ್ನು ಬದಲಾಯಿಸಲಾಗಿದೆ.
ಕಂಟೈನ್‍ಮೆಂಟ್ ವಲಯದ ನಿವಾಸಿಗಳಾಗಿರುವ ವಿದ್ಯಾರ್ಥಿಗಳು ಆರೋಗ್ಯ ಇಲಾಖೆ ನೀಡಿರುವ ದಾಖಲೆಗಳನ್ನು ಹಾಜರುಪಡಿಸಿದರೆ ವಿಶೇಷ ಪರೀಕ್ಷೆ ನಡೆಸಲಾಗುವುದು ಎಂದು ಪರೀಕ್ಷಾ ನಿಯಂತ್ರಕರು ತಿಳಿಸಿದ್ದಾರೆ.
ಕೋಝಿಕ್ಕೋಡ್ ಜಿಲ್ಲೆಯ ಏಳು ಗ್ರಾಮ ಪಂಚಾಯತ್‍ಗಳಿಗೆ ಸೇರಿದ ವಾರ್ಡ್‍ಗಳನ್ನು ಕಂಟೈನ್‍ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಕಂಟೈನ್‍ಮೆಂಟ್ ವಲಯಗಳ ಒಳಗೆ ಅಥವಾ ಹೊರಗೆ ಯಾವುದೇ ಪ್ರಯಾಣವನ್ನು ಅನುಮತಿಸಲಾಗುವುದಿಲ್ಲ. ಬ್ಯಾಂಕ್‍ಗಳು, ಶಾಲೆಗಳು ಮತ್ತು ಅಂಗನವಾಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಪ್ರದೇಶದಲ್ಲಿ ಬ್ಯಾರಿಕೇಡ್‍ಗಳನ್ನು ನಿರ್ಮಿಸಲಾಗಿದೆ. ಅಗತ್ಯ ಅಂಗಡಿಗಳು ಮತ್ತು ಮೆಡಿಕಲ್ ಶಾಪ್‍ಗಳು ಮಾತ್ರ ತೆರೆದಿರುತ್ತವೆ.