ಬದಿಯಡ್ಕ: ಬದಿಯಡ್ಕ ಪೋಲಿಸ್ ಠಾಣೆಯಿಂದ ವರ್ಗಾವಣೆಗೊಂಡಿರುವ ಠಾಣಾಧಿಕಾರಿ ವಿನೋದ್ ಕುಮಾರ್ ಅವರನ್ನು ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಸನ್ಮಾನಿಸಲಾಯಿತು. ಗಣಪತಿ ಪ್ರಸಾದ ಕುಳಮರ್ವ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಮಕೃಷ್ಣ ಹೆಬ್ಬಾರ್ ಸ್ವಾಗತಿಸಿ, ರಮೇಶ್ ಕಳೇರಿ ನಿರೂಪಿಸಿದರು. ಬಾಲಗೋಪಾಲ ಏಣಿಯರ್ಪು, ಸುರೇಶ್ ಮಿಮಿಕ್ರಿ, ಶಿಶುಮಂದಿರದ ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.