HEALTH TIPS

ಮೆಕ್ಸಿಕೋ ಸಂಸತ್‌ನಲ್ಲಿ 'ಏಲಿಯನ್'ಗಳ ಶವ ಪ್ರದರ್ಶನ!

            ಮೆಕ್ಸಿಕೋ: ಜಗತ್ತಿನಲ್ಲಿ ಶತಮಾನಗಳಿಂದಲೂ ಅನ್ಯಗ್ರಹ ಜೀವಿ ಅಥವಾ ಏಲಿಯನ್ ಗಳ ಇರುವಿಕೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವಂತೆಯೇ ಅತ್ತ ಮೆಕ್ಸಿಕೋದಲ್ಲಿ  'ಏಲಿಯನ್'ಗಳ ಶವಗಳನ್ನು ಪ್ರದರ್ಶನ ಮಾಡಲಾಗಿದೆ.

                   ಅಚ್ಚರಿಯಾದರೂ ಸತ್ಯ.. ಮೆಕ್ಸಿಕೋ ನಗರದಲ್ಲಿ ವಿಚಿತ್ರ ಬೆಳವಣಿಗೆಯೊಂದರಲ್ಲಿ ದೇಶದ ಸಂಸತ್‌ನಲ್ಲಿಯೇ ಎರಡು 'ಏಲಿಯನ್‌'ಗಳ ಕಳೇಬರವನ್ನು ಪ್ರದರ್ಶಿಸಲಾಗಿದೆ. ಮೆಕ್ಸಿಕೋ ಕಾಂಗ್ರೆಸ್‌ನ ಸಾರ್ವಜನಿಕ ಅಹವಾಲು ಆಲಿಸುವ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿತ್ತು. ಆ ಸಂದರ್ಭದಲ್ಲಿ, 'ಯುಎಫ್‌ಒ ಮತ್ತು ಅಪರಿಚಿತ ಅಸಂಗತ ವಿದ್ಯಮಾನ'ಗಳನ್ನು ವಿವರಿಸುವ ವಿವಿಧ ವಿಡಿಯೋಗಳನ್ನು ಪ್ರದರ್ಶಿಸಲಾಗಿತ್ತು. ಅದರ ಬಳಿಕ ಎರಡು 'ಏಲಿಯನ್ ಶವ'ಗಳನ್ನು ತೋರಿಸಲಾಗಿದೆ ಎಂದು ಸ್ಥಳೀಯ ಮೆಕ್ಸಿಕನ್ ಮಾಧ್ಯಮಗಳು ವರದಿ ಮಾಡಿವೆ.


                    ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಂಸತ್ ಭವನದ ಸಿಬ್ಬಂದಿಗಳು ಎಂದು ಹೇಳಲಾದ ಇಬ್ಬರು ಶವಪಟ್ಟಿಗೆಯಲ್ಲಿದ್ದ ಏಲಿಯನ್ ಗಳ ಶವಗಳನ್ನು ಪ್ರದರ್ಶಿಸಿದ್ದಾರೆ. ಪಾರದರ್ಶಕ ಪೆಟ್ಟಿಗೆ ಒಳಗೆ ಇರಿಸಿದ ಎರಡು ಏಲಿಯನ್ ಅಥವಾ 'ಮನುಷ್ಯೇತರ' ದೇಹಗಳ ಸಣ್ಣ ಗಾತ್ರದ ಶವಗಳನ್ನು ಆನ್‌ಲೈನ್‌ ನೇರ ಪ್ರಸಾರದಲ್ಲಿ ಪ್ರದರ್ಶಿಸಲಾಗಿದೆ. ಇದನ್ನು ವೀಕ್ಷಿಸುತ್ತಿದ್ದ ಜನರು ಹಾಗೂ ಗಣ್ಯರು ಆಘಾತಕ್ಕೆ ಒಳಗಾಗಿದ್ದಾರೆ. 

                                ಗಣ್ಯರ ಸಮ್ಮುಖದಲ್ಲೇ ಏಲಿಯನ್ ಶವಗಳ ಪ್ರದರ್ಶನ
                     ಖ್ಯಾತ ಪತ್ರಕರ್ತ ಹಾಗೂ ಯುಎಫ್‌ಒ ತಜ್ಞ ಜೈಮಿ ಮೌಸನ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ವಿಜ್ಞಾನಿಗಳು ಮತ್ತು ಅಮೆರಿಕನ್ಸ್ ಫಾರ್ ಸೇಫ್ ಏರೋಸ್ಪೇಸ್ ಕಾರ್ಯಕಾರಿ ನಿರ್ದೇಶಕ ಹಾಗೂ ಅಮೆರಿಕ ಮಾಜಿ ನೌಕಾದಳದ ಪೈಲಟ್ ರಿಯಾನ್ ಗ್ರೇವ್ಸ್ ಅವರ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಒಂದು ಸಾವಿರ ವರ್ಷಗಳಷ್ಟು ಹಳೆಯವು ಎನ್ನಲಾದ ಈ ಶವಗಳನ್ನು ಪೆರುವಿನ ಕುಸ್ಕೋದಲ್ಲಿ ಪತ್ತೆ ಮಾಡಲಾಗಿತ್ತು. ಇವು ನಿಜಕ್ಕೂ ಏಲಿಯನ್‌ಗಳ ಶವ ಎಂದು ವಿಜ್ಞಾನಿಗಳು ಪ್ರಮಾಣ ಕೂಡ ಮಾಡಿದ್ದಾರೆ. ಮೆಕ್ಸಿಕನ್ ಸರ್ಕಾರದ ಸದಸ್ಯರು ಮತ್ತು ಅಮೆರಿಕ ಅಧಿಕಾರಿಗಳ ಸಮ್ಮುಖದಲ್ಲಿ ಜೈಮಿ ಮೌಸನ್ ಅವರು ಈ ಶವಗಳು 'ಯುಎಫ್‌ಓ ಮಾದರಿಗಳು' ಎಂದು ಪ್ರತಿಪಾದಿಸಿದ್ದಾರೆ. ಇವುಗಳ ಮೇಲೆ ಮೆಕ್ಸಿಕೋದ ಆಟೊನೊಮಸ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ ಇತ್ತೀಚೆಗೆ ಅಧ್ಯಯನ ನಡೆಸಲಾಗಿದೆ ಎಂದಿದ್ದಾರೆ.

                                 ಭೂಮಿಯಲ್ಲಿ ಇಂತಹ ಡಿಎನ್‌ಎ ಎಲ್ಲಿಯೂ ಇಲ್ಲ ಎಂದು ವಾದ

                    ರೇಡಿಯೋ ಕಾರ್ಬನ್ ಡೇಟಿಂಗ್ ತಂತ್ರಜ್ಞಾನದ ಮೂಲಕ 'ಏಲಿಯನ್' ಮಾದರಿಗಳಲ್ಲಿನ ಡಿಎನ್‌ಎ ಪುರಾವೆಗಳನ್ನು ಹೊರ ತೆಗೆಯುವಲ್ಲಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಫಲರಾಗಿದ್ದಾರೆ ಎಂದು ಹೇಳಲಾಗಿದ್ದು, ಈ ಮಾದರಿಗಳು ನಮಗೆ ಪರಿಚಿತವಾಗಿರುವ ಭೂ ಪ್ರದೇಶದ ವಿಕಸನದ ಯಾವ ಭಾಗಕ್ಕೂ ಹೊಂದಾಣಿಕೆಯಾಗುವುದಿಲ್ಲ ಎಂದು ಮೌಸನ್ ಪ್ರತಿಪಾದಿಸಿದ್ದಾರೆ. ಯುಎಫ್‌ಒ ಒಂದರ ಅವಘಡದ ಬಳಿಕ ಇವು ಭೂಮಿಯನ್ನು ಸೇರಿರಬಹುದು ಎಂದು ನಂಬಲಾಗಿತ್ತು. ಆದರೆ ಡಿಯೊಟಾಮ್ ಎಂಬ ಒಂದು ಬಗೆಯ ಪಾಚಿಗಳ ನಡುವೆ ಇವು ಪತ್ತೆಯಾಗಿದ್ದು, ಅಲ್ಲಿಯೇ ಕ್ರಮೇಣ ಪಳೆಯುಳಿಕೆಗಳಂತಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

                      ಇತರೆ ಡಿಎನ್‌ಎ ಮಾದರಿಗಳ ಜತೆ ಇವುಗಳನ್ನು ಹೋಲಿಕೆ ಮಾಡಿದಾಗ, ಶೇ 30ಕ್ಕಿಂತ ಅಧಿಕ ಡಿಎನ್ಎ 'ಅಪರಿಚಿತ'ವಾಗಿರುವುದು ಕಂಡುಬಂದಿದೆ. ಒಂದು ದೇಹವನ್ನು ಎಕ್ಸ್‌ರೇಗೆ ಒಳಪಡಿಸಿದಾಗ, ಒಳಗೆ 'ಮೊಟ್ಟೆಗಳು' ಇರುವುದು ಪತ್ತೆಯಾಗಿದೆ. ಎರಡರಲ್ಲಿಯೂ ಒಸ್ಮಿಯಮ್ ಸೇರಿದಂತೆ ಬಹಳ ಅಪರೂಪದ ಲೋಹಗಳಿಂದ ಮಾಡಿದ ಕಸಿ ಕಂಡುಬಂದಿದೆ ಎಂದು ಮೌಸನ್ ತಿಳಿಸಿದ್ದಾರೆ.

                         2017 ರಲ್ಲಿ ಪೆರುವಿನ ನಜ್ಕಾದಲ್ಲಿ ಪತ್ತೆಯಾದ 5 ಮಮ್ಮಿಗಳ ವಿಶ್ಲೇಷಣೆಯಲ್ಲಿ ತೊಡಗಿಸಿಕೊಂಡಿದ್ದ ಜೇಮ್ ಮೌಸ್ಸನ್ ಒಬ್ಬ ಪತ್ರಕರ್ತೆ, ಟಿವಿ ಪರ್ಸನಾಲಿಟಿ ಮತ್ತು ಯುಎಫ್‌ಇ ವಿಶ್ಲೇಷಕರು (UFOlogist) ಆಗಿದ್ದಾರೆ. 

                                                   ಇದೆಲ್ಲಾ ಸುಳ್ಳು ಎಂದ ತಜ್ಞರು
                     Snopes.com ನಲ್ಲಿನ ವರದಿಯ ಪ್ರಕಾರ, ಏಲಿಯನ್ ಎಂಬುದು ಕಟ್ಟು ಕಥೆ ಎಂದು ಹೇಳಿದೆ. ರಕ್ಷಿತ ಶವವು ಮಗುವಿನದ್ದು ಎಂದು ನಂಬಲಾಗಿದೆ. "ಗಯಾ ವೀಡಿಯೋದಲ್ಲಿ ತೋರಿಸಿರುವಂತೆ ಪೆರುವಿನಲ್ಲಿ ಉದ್ದನೆಯ ತಲೆಬುರುಡೆಗಳನ್ನು ಹೊಂದಿರುವ ಮಮ್ಮಿಗಳ ಹಿಂದಿನ ಆವಿಷ್ಕಾರವು ಅನ್ಯಲೋಕದ ಪ್ರಭೇದಗಳ ಬಗ್ಗೆ ಇದೇ ರೀತಿಯ ಊಹಾಪೋಹಗಳನ್ನು ಪ್ರೇರೇಪಿಸಿದೆ. ಆದರೆ ಉದ್ದನೆಯ ತಲೆಬುರುಡೆಗಳು ಕೃತಕ ಕಪಾಲದ ವಿರೂಪತೆಯ ಪುರಾತನ ಅಭ್ಯಾಸದ ಪರಿಣಾಮವಾಗಿದೆ ಎಂದು ಮಾನವಶಾಸ್ತ್ರಜ್ಞರು ವಿವರಿಸಿದ್ದಾರೆ, ಇದರಲ್ಲಿ ಚಿಕ್ಕ ಮಕ್ಕಳು ತಮ್ಮ ತಲೆಗಳನ್ನು ಬಟ್ಟೆ, ಹಗ್ಗ ಅಥವಾ ಮರದ ಹಲಗೆಗಳಲ್ಲಿ ಬಂಧಿಸಿದ್ದರು, ಬಹುಶಃ ಧಾರ್ಮಿಕ ಆಚರಣೆಯ ಭಾಗವಾಗಿರಬಹುದು." ಎಂದು ಶಂಕಿಸಿದ್ದಾರೆ.

                         ವಾಸ್ತವವಾಗಿ, ಒಂದು ಡಜನ್ ಪೆರುವಿಯನ್ ಮಮ್ಮಿ ಸಂಶೋಧಕರು ಏಲಿಯನ್ಸ್ ಶವಗಳ ಪ್ರದರ್ಶನ ಖಂಡಿಸಿ ಪತ್ರವೊಂದನ್ನು ಬರೆದಿದ್ದು, ಇದು "ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸಿದೆ" ಎಂದು ಹೇಳಲಾಗಿದೆ.

     

    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    Qries