ತ್ರಿಶೂರ್: ಕುಟ್ಟನೆಲ್ಲೂರು ಸರ್ಕಾರಿ ಕಾಲೇಜಿನಲ್ಲಿ ಮೆಗಾ ತಿರುವಾತಿರ ನೃತ್ಯವನ್ನು ಆಯೋಜಿಸಿರುವ ಕುಟುಂಬಶ್ರೀ ವಿಶ್ವ ದಾಖಲೆಯ ಗುರಿ ಹೊಂದಿದ್ದು, ಗಿನ್ನಿಸ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್‍ಗೆ ನಮೂದು ಸಲ್ಲಿಸಲು ಚಿಂತನೆ ನಡೆಸಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
ಕಾಲೇಜು ಮೈದಾನದಲ್ಲಿ ಕುಟುಂಬಶ್ರೀಯ 7,027 ಸದಸ್ಯರು ಜಮಾಯಿಸಿ ತಿರುವಾದಿರ ಪ್ರದರ್ಶಿಸಿದರು. ಮೆಗಾ ತಿರುವಾದಿರಕಳಿಗೆ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ಮತ್ತು ಟ್ಯಾಲೆಂಟ್ ರೆಕಾರ್ಡ್ ಬುಕ್‍ನಲ್ಲಿ ಭಾಗವಹಿಸಿದವರ ಸಂಖ್ಯೆಯಿಂದ ಸ್ಥಾನ ಲಭಿಸಿದೆ.
ಹತ್ತು ನಿಮಿಷಗಳ ಕಾಲ ನಡೆದ ಮೆಗಾ ತಿರುವಾದಿರ ಪ್ರಸ್ತುತಿ ನೆರೆದಿದ್ದವರ ಮನಸೂರೆಗೊಂಡಿತು. ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಡೆದ ಓಣಂ ಸಮಾರಂಭದ ಭಾಗವಾಗಿ ಈ ಪ್ರದರ್ಶನ ಆಯೋಜಿಸಲಾಗಿತ್ತು.