ಮುಳ್ಳೇರಿಯ: ಪುಂಡೂರು ಗಜಕರ್ಣ ಕುಣಿತ ಭಜನಾ ಸಂಘದ ಮಕ್ಕಳ ರಂಗಪ್ರವೇಶ ಕಾರ್ಯಕ್ರಮ ಮುಳಿಯಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು.
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ ಸಮಾರಂಭ ಉದ್ಘಾಟಿಸಿದರು. ಪುಷ್ಪಾವತಿ ಮಾಳಂಗೈ ಅಧ್ಯಕ್ಷತೆ ವಹಿಸಿದ್ದರು
ವಿಶ್ವ ಹಿಮಧೂ ಪರಿಷತ್ತ್ ಮುಖಂಡರಾದ ರಾಜನ್ ಮುಳಿಯಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿವೃತ್ತ ಶಿಕ್ಷಕ ಕೃಷ್ಣೋಜಿ ರಾವ್ ಪುಂಡೂರು ಹಾಗೂ ಕುಣಿತ ಭಜನಾ ಶಿಕ್ಷಕ ವಿಶ್ವನಾಥ ಬಳವಂತಡ್ಕ ಉಪಸ್ಥಿತರಿದ್ದರು. ಕುಸುಮ ಅಂಬುಕುಂಜೆ ಸ್ವಾಗತಿಸಿದರು. ಸುಜಾತ ಅಂಬುಕುಂಜೆ ವಂದಿಸಿದರು.