ಕುಂಬಳೆ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ನೇತೃತ್ವದಲ್ಲಿ ಶುಕ್ರವಾರ ಅಪರಾಹ್ನ ಕುಂಬಳೆಯಲ್ಲಿ ‘ಗ್ರಂಥಾಲಯ ಸಂರಕ್ಷಣಾ ಸಭೆ’ ನಡೆಯಿತು.
ಗ್ರಂಥಾಲಯಗಳನ್ನು ಕನ್ಕರೆಂಟ್ ಪಟ್ಟಿಗೆ ಸೇರಿಸಿರುವ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಪ್ರತಿಭಟನಾ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಾ. ಪ್ರಭಾಕರನ್ ಉದ್ಘಾಟಿಸಿದರು. ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಪಿ.ಕೆ. ಅಹ್ಮದ್ ಹುಸೈನ್, ತಾಲೂಕು ಸಮಿತಿಯ ಬಶೀರ್ ಕೊಟ್ಟುಡೇಲ್, ಬಾಲಕೃಷ್ಣ ಶೆಟ್ಟಿಗಾರ್, ಗಿರಿಜಾ ತಾರನಾಥ್, ಜಯಂತ ಮಾಸ್ತರ್ ಮಾತನಾಡಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ಲ ಕೆ ಪ್ರತಿಭಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಟನಾ ಕಾರ್ಯಕ್ರಮದಲ್ಲಿ ಅಕ್ಷರ ಜ್ವಾಲೆ ಬೆಳಗಿಸಲಾಯಿತು. ಉಪಾಧ್ಯಕ್ಷ ಶ್ಯಾಮ್ ಭಟ್ ಸಂರಕ್ಷಣಾ ಪ್ರತಿಜ್ಞೆ ವಾಚಿಸಿ ಮಾತನಾಡಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಕಮಲಾಕ್ಷ. ಕೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶ್ರೀಕುಮಾರಿ ವಂದಿಸಿದರು.