ಕಾಸರಗೋಡು: ನಗರಸಭೆಯ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಎನ್‍ಫೋರ್ಸ್‍ಮೆಂಟ್ ದಳದ ಜಂಟಿ ಕಾಯಚರಣೆಯನ್ವಯ ವಿವಿಧ ವ್ಯಾಪಾರಿ ಕೇಂದ್ರಗಳಿಗೆ ದಾಳಿ ನಡೆಸಿ ಒಂದು ಕ್ವಿಂಟಲ್‍ಗೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಪ್ರಮುಖ ಮೂರು ಅಂಗಡಿಗಳಿಂದ ಈ ಪ್ಲಾಸ್ಟಿಕ್ ಉತ್ಪನ್ನ ವಶಪಡಿಸಿಕೊಳ್ಳಲಾಗಿದೆ. ನಿಷೇಧಿತ ಸಾಮಗ್ರಿ ವಶಪಡಿಸಿರುವ ಈ ಮೂರೂ ಅಂಗಡಿಗಳಿಗೆ ಸ್ಪಾಟ್ ಫೈನ್ ಅನ್ವಯ ತಲಾ 10,000 ರೂ. ದಂಡ ವಿಧಿಸಲಾಗಿದೆ. ತಪಾಸಣಾ ತಂಡದಲ್ಲಿ ಜಿಲ್ಲಾ ಎನ್‍ಫೋರ್ಸ್‍ಮೆಂಟ್ ಲೀಡರ್ ಟಿ. ಬಿಜು, ಎನ್‍ಫೋರ್ಸ್‍ಮೆಂಟ್ ಅಧಿಕಾರಿ ಎಂ. ಟಿ. ಪಿ. ರಿಯಾಸ್, ನಗರಸಭೆ ಆರೋಗ್ಯ ವಿಭಾಗದ ಆಶಾ ಮೇರಿ, ಅಂಬಿಕಾ ನೇತೃತ್ವ ವಹಿಸಿದ್ದರು.