ಕಾಸರಗೋಡು: 2023ನೇ ಸಾಲಿನ ಮಣಿಪಾಲ ಆರೋಗ್ಯ ಕಾರ್ಡ್‍ಯೋಜನೆಯ ದಾಖಲಾತಿಯು ಪ್ರಾರಂಭವಾಗಿದ್ದು ಕಾಸರಗೋಡು ಜಿಲ್ಲೆಯ ಜನತೆಗೂ ಇದರ ಪ್ರಯೋಜನ ಲಭ್ಯವಾಗುವ ರೀತಿಯಲ್ಲಿ ನೋಂದಾವಣಾ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಮಂಗಳೂರು ಅತ್ತಾವರದ ಕೆ.ಎಂ.ಸಿ.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಜಾನ್ ರಾಮಪುರಂ ತಿಳಿಸಿದ್ದಾರೆ.
ಅವರು ಕಾಸರಗೋಡು ಪ್ರೆಸ್‍ಕ್ಲಬ್ ಮೂಲಕ ಕಾಸರಗೋಡಿನ ಪತ್ರಕರ್ತರಿಗಾಗಿ ಮಣಿಪಾಲ್ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದರು.
ಮಣಿಪಾಲ ಸಮೂಹ ಸಂಸ್ಥೆಗಳ ಸಂಸ್ಥಾಪಕ ದಾರ್ಶನಿಕ ಡಾ. ಟಿ.ಎಂ.ಎ ಪೈ ಅವರ 125ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಅವರ ಉದಾತ್ತಕಾರ್ಯವನ್ನು ಸ್ಮರಿಸುವುದರ ಜತೆಗೆ ಆರೋಗ್ಯಸೇವೆಯನ್ನು ಸಮಾಜಕ್ಕೆ ಸುಲಭವಾಗಿ ಲಭಿಸುವಂತೆ ಮಾಡಿದ ಅಪರೂಪದ ವ್ಯಕ್ತಿತ್ವ ಡಾ. ಟಿ.ಎಂ.ಎ.ಪೈ ಅವರ ನೆನಪಿನ ಹಿನ್ನೆಲೆಯಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಸಾರ್ವಜನಿಕರಿಗೆ ತಲುಪಿಸಲು ಮಣಿಪಾಲ್ ಆರೋಗ್ಯ ಕಾರ್ಡು ಪರಿಚಯಿಸಲಾಗುತ್ತಿದೆ.
ಸಣ್ಣ ಮೊತ್ತವನ್ನುಪಾವತಿಸುವ ಮೂಲಕ ಕುಟುಂಬದ ಸದಸ್ಯರಿಗೆ ಕಾರ್ಡಿನ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಮಣಿಪಾಲ ಆರೋಗ್ಯಕಾರ್ಡನ್ನು2000ನೇ ಇಸವಿಯಲ್ಲ್ಲಿ ಪ್ರಾರಂಭಿಸಲಾಗಿದ್ದು, ಗುಣಮಟ್ಟದ ಆರೋಗ್ಯ ಸೇವೆ ಜತೆಗೆ ಪ್ರತಿ ವರ್ಗದ ಜನರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭ್ಯವಾಗಿಸುವುದು ಯೋಜನೆಯ ಉದ್ದೇಶವಾಗಿದೆ. ಅವಿಭಜಿತ ದ.ಕ ಜಿಲ್ಲೆಯಲ್ಲಿಆರಂಭಗೊಂಡ ಯೋಜನೆ ಇಂದು ಇತರ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಕಾರ್ಡು ಮೂಲಕ ಮಣಪಾಲ್ ಸಮೂಹ ಆಸ್ಪತ್ರೆಗಳಾದ ಕೆ. ಎಂ.ಸಿ.ಆಸ್ಪತ್ರೆ ಅತ್ತಾವರ, ಕೆ.ಎಂ.ಸಿ. ಆಸ್ಪತ್ರೆ ಜ್ಯೋತಿವೃತ್ತ, ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಕಟೀಲು, ಕಸ್ತೂರ್ಬಾ ಆಸ್ಪತ್ರೆಮಣಪಾಲ, ಡಾ.ಟಿಎಂಎ ಪೈ ಆಸ್ಪತ್ರೆ ಉಡುಪಿ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಕಾರ್ಕಳ, ಹಾಗೂ ಗೋವಾದ ಮಣಿಪಾಲ್ ಆಸ್ಪತ್ರೆಯಲ್ಲಿ ರಿಯಾಯಿತಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕಾಸರಗೋಡು ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ನಡೆದ ಸಮಾರಂಬದಲ್ಲಿ ಪ್ರೆಸ್ ಕ್ಲಬ್ ಪರವಾಗಿ ಕಾಸರಗೋಡು ಪ್ರೆಸ್‍ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯರಾದ ಪುರುಷೋತ್ತಮ ಪೆರ್ಲ ಹಾಗೂ ಅಬ್ದುಲ್ಲಕುಞÂ ಉದುಮ ಆರೊಗ್ಯ ಕಾರ್ಡು ಸ್ವೀಕರಿಸಿದರು. ಆಸ್ಪತ್ರೆ ಪ್ರಬಂಧಕ ರವಿರಾಜ್, ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.