HEALTH TIPS

ಕೃಷಿಆಧಾರಿತ ಉತ್ಪನ್ನಗಳ ಸುಧಾರಣೆಗೆ ಸರ್ಕಾರದ ಯೋಜನೆಗಳನ್ನು ಕೃಷಿಕರು ಸದುಪಯೋಗಪಡಿಸಿಕೊಳ್ಳಬೇಕು-ಸಚಿವೆ ಶೋಭಾ ಕರಂದ್ಲಾಜೆ

  

                     ಕಾಸರಗೋಡು: ಉತ್ಪಾದನೆ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಮತ್ತು ರಫ್ತು ಆಧಾರಿತ ವ್ಯಾಪಾರವನ್ನು ಸುಧಾರಿಸಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಕೃಷಿ ಆವಿಷ್ಕಾರ ನಿಧಿಯಂತಹ  ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಲು ಕೃಷಿಕರು ಮುಂದೆ ಬರಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ  ತಿಳಿಸಿದ್ದಾರೆ.

             ಅವರು ತೆಂಗು ಅಭಿವೃದ್ಧಿ ಮಂಡಳಿ ಮತ್ತು ಐಸಿಎಆರ್-ಸಿಪಿಸಿಆರ್‍ಐ ಕಾಸರಗೋಡು ಇವರ ಸಂಯುಕ್ತ ಆಶ್ರಯದಲ್ಲಿ  ಕಾಸರಗೋಡು ಸಿಪಿಸಿಆರ್‍ಐ ಸಭಾಂಗಣದಲ್ಲಿ ಸನಿವಾರ ನಡೆದ  25 ನೇ ವಿಶ್ವ ತೆಂಗು ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. 


                 ನಮ್ಮ ಮೌಲ್ಯವರ್ಧಿತ ಉತ್ಪನ್ನಗಳನ್ನು ಸ್ಥಳೀಯವಾಗಿ ಹಾಗೂ ವಿಶ್ವದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರಿಸಿಕೊಂಡಿದೆ. ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗೆ ಕೃಷಿಕರು  ಹೆಚ್ಚಿನ ಗಮನಹರಿಸಬೇಕು. ನಮ್ಮ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗೆ ಹೆಚ್ಚಿನಪ್ರಮಾಣದಲ್ಲಿ ರಫ್ತಾಗುವ ರೀತಿಯಲ್ಲಿ ಉತ್ಪಾದನೆ ದ್ವಿಗುಣಗೊಳಿಸುವಂತೆ ಅವರು ಉದ್ಯಮಿಗಳನ್ನು ಒತ್ತಾಯಿಸಿದರು. ಕೃಷಿಕರು ಕಳಪೆ ಬೀಜಗಳ ಹಾವಳಿಯಿಂದ ಅಪಾರ ನಷ್ಟ ಅನುಭವಿಸುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ಯೂಆರ್ ಕೋಡ್ ಒಳಗೊಂಡ ಬಿತ್ತನೆ ಬೀಜಗಳನ್ನು ಮಾರುಕಟ್ಟೆಗೆ ಪೂರೈಸುತ್ತಿರುವುದು ಶ್ಲಾಘನೀಯ. ಕೊಬ್ಬರಿ ಕೇಂದ್ರಿತ ಸಂಸ್ಕರಣೆ ಜತೆಗೆ ನೀರಾ, ತೆಂಗಿನೆಣ್ಣೆ ಮತ್ತು ಚಿಪ್ಸ್‍ಗಳಂತಹ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗೆ ಆದ್ಯತೆ ನೀಡುವ ಅಗತ್ಯದ ಬಗ್ಗೆಮನವರಿಕೆ ಮಾಡಿದರು.  

                  ಯುವ ಸಮೂಹ ಕೃಷಿ ಉದ್ದಿಮೆಯತ್ತ ಸಾಗಿ ಬರಬೇಕು. ಯಾವುದೇ ಕೃಷಿ ಉದ್ದಿಮೆ ನಡೆಸುತ್ತಿದ್ದರೂ, ಇದಕ್ಕೆ ಎಲ್ಲ ರಈತಿಯ ನೆರವು ಒದಗಿಸಲು ಕೇಂದ್ರ ಕೃಷಿ ಸಚಿವಾಲಯ ಸಿದ್ಧವಿದೆ. ಯೋಜನೆ ತಯಾರಿಸಿ ನೀಡಿದಲ್ಲಿ ಇದನ್ನು ಖುದ್ದು ಪರಿಶೀಲಿಸುವುದಾಗಿ ತಿಳಿಸಿದರು.


             ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇರಳದ ತೆಂಗು ಬೆಳೆಗಾರರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ಕೇಂದ್ರ ಗಮನಹರಿಸಬೇಕು ಎಂದು ತಿಳಿಸಿದರು. ಈ ಸಂದರ್ಭ ಸಚಿವೆ ಶೋಭಾ ಕರಂದ್ಲಾಜೆ ಅವರು ಟಿಶ್ಯೂ ಕಲ್ಚರ್, ಕೃಷಿ ಉತ್ಪನ್ನಗಳು ಸೇರಿದಂತೆ ಕೇಂದ್ರದ ವಿವಿಧ ಸಂಶೋಧನಾ ಲ್ಯಾಬ್‍ಗಳಿಗೆ ಭೇಟಿ ನೀಡಿದರು. ಡ್ರೋಣ್ ಮೂಲಕ ತೆಂಗಿಗೆ ಔಷಧ ಸಿಂಪಡಣೆ, ತೆಂಗಿನ ಮರವೇರುವ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು. ತೆಂಗಿನ ಉತ್ಪನ್ನಗಳನ್ನು ಒಳಗೊಂಡ ವಸ್ತುಪ್ರದರ್ಶನ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭ ಸಚಿವೆ ಶೋಭಾ ಕರಂದ್ಲಾಜೆ ಅವರು ತಮ್ಮ ಭೇಟಿಯ ನೆನಪಿಗಾಗಿ ಸಿಪಿಸಿಆರ್‍ಐ ವಠಾರದಲ್ಲಿ ತೆಂಗಿನ ಸಸಿ ನೆಟ್ಟು ನೀರೆರೆದರು. 

             ಐಸಿಎಆರ್ ನ ಸಹಾಯಕ ಮಹಾನಿರ್ದೇಶಕ (ಹಣ್ಣು ಮತ್ತು ತೋಟದ ಬೆಳೆಗಳು) ಡಾ.ವಿ.ಬಿ.ಪಟೇಲ್, ತೆಂಗು ಮಂಡಳಿ ಉಪಾಧ್ಯಕ್ಷ ಬಿ.ಎಚ್.ರೇಣುಕುಮಾರ್, ಬ್ಯಾಮ್ಕೊ ಅಧ್ಯಕ್ಷ ಪಿ.ಆರ್.ಮುರಳೀಧರನ್,  ತೆಂಗು ಅಭಿವೃದ್ಧಿಮಂಡಳಿ ಮುಖ್ಯ ತೆಂಗು ಅಭಿವೃದ್ಧಿ ಅಧಿಕಾರಿ ಡಾ.ಬಿ.ಹನುಮಂತಗೌಡ, ಐಸಿಎಆರ್-ಸಿಪಿಸಿಆರ್‍ಐ ಸಮಾಜವಿಜ್ಞಾನ ಮುಖ್ಯಸ್ಥ ಡಾ. ಮುರಳೀಧರನ್, ಐಸಿಎಆರ್, ತೆಂಗು ಅಭಿವೃದ್ಧಿ ಮಂಡಳಿ ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳ ಪ್ರತಿನಿಧಿಗಳು, ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಪ್ರಗತಿಪರ ರೈತರು, ಉದ್ಯಮಿಗಳು, ಉತ್ಪಾದಕರು ಮತ್ತು ಸಂಶೋಧಕರು ಪಾಲ್ಗೊಂಡಿದ್ದರು.  ಸಿಪಿಸಿಆರ್‍ಐ ನಿರ್ದೇಶಕ ಡಾ.ಕೆ. ಬಿ.ಹೆಬ್ಬಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿಡಿಬಿ ನಿರ್ದೇಶಕ ಡಾ. ದೀಪ್ತಿ ನಾಯರ್ ವಂದಿಸಿದರು.

               25 ಕ್ಕೂ ಹೆಚ್ಚು ಸಂಸ್ಥೆಗಳು ಯಾ ಉದ್ಯಮಿಗಳು ತಂತ್ರಜ್ಞಾನ ಮತ್ತು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದರು. ಇದರಲ್ಲಿ ಎಫ್‍ಪಿಒಗಳಿಂದ ಕಲ್ಪರಸ ಮಾರ್ಕೆಟಿಂಗ್‍ನ ಯಶಸ್ವಿ ಮಾದರಿಗಳು, ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಗಳು ಮತ್ತು ತಂತ್ರಜ್ಞಾನ ಪ್ರದರ್ಶನ ಮತ್ತು ಪ್ರದರ್ಶನ ಒಳಗೊಂಡಿತ್ತು.ಉದ್ಯಮಿಗಳನ್ನು ಗೌರವಿಸುವುದು, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕಾರ್ಯಾಗಾರ ನಡೆಯಿತು.

                    ಸಚಿವೆ ಶೋಭಾ ಕರಂದ್ಲಾಜೆ ಅವರು ತುಳು, ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಭಾಷಣ ಮಾಡುವ ಮೂಲಕ ಗಮನಸೆಳೆದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries