ಕುಂಬಳೆ: ಆರಿಕ್ಕಾಡಿಯ ಶ್ರೀಪಿಲಿಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ಕೋಮರಾಯಿ ದೈವಸ್ಥಾನ, ಬೀರಂಟಿಕೆರೆ ಇದರ ಪ್ರತಿಷ್ಠಾ ಮಹೋತ್ಸವದ ಮತ್ತು ದೈವಗಳ ನೇಮೋತ್ಸವದ ಪೂರ್ವಭಾವಿ ಸಭೆ ಬ್ರಹ್ಮಶ್ರೀ ವೇದಮೂರ್ತಿ ಚಕ್ರಪಾಣಿದೇವ ಪೂಜಿತ್ತಾಯರ ನಿವಾಸದಲ್ಲಿ ನೆರವೇರಿತು.
ಬ್ರಹ್ಮಶ್ರೀ ವೇದಮೂರ್ತಿ ಚಕ್ರಪಾಣಿ ದೇವ ಪೂಜಿತ್ತಾಯರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸರ್ವಾನುಮತದಿಂದ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಬ್ರಹ್ಮಶ್ರೀ ವೇದಮೂರ್ತಿ ಚಕ್ರಪಾಣಿದೇವ ಪೂಜಿತ್ತಾಯ, ಬ್ರಹ್ಮ ಶ್ರೀ ಯೋಗೀಶ ಕಡಮಣ್ಣಾಯರು ಮತ್ತು ಕೇಶವ ಪ್ರಸಾದ ನಾಣಿತ್ತಿಲು ಅವರನ್ನು ಆಯ್ಕೆ ಮಾಡಲಾಯಿತು.
ಶಂಕರ ನಾರಾಯಣ ಭಟ್ಟ ಕುಳ್ಳಂಬೆಟ್ಟು, ನಾರಾಯಣ ಪೂಜಾರಿ ಬಂಬ್ರಾಣ ಕೊಟ್ಯದಮನೆ, ನಾರಾಯಣ ಪೂಜಾರಿ ಅಮೆತ್ತೋಡು, ವೇಣುಪಾಲ ಪೂಜಾರಿ, ಚನಿಯಪ್ಪ ಪೂಜಾರಿ ಪಾದೆಕಲ್ಲು, ಕೆ.ನಾರಾಯಣ ಗಟ್ಟಿ ಇವರು ಸಮಿತಿಗೆ ಸಲಹೆಗಾರರಾಗಿರುವರು.
ಸಮಿತಿಯ ಅಧ್ಯಕ್ಷರಾಗಿ ಮಂಜುನಾಥ ಆಳ್ವ ಮಡ್ವ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಕುಂಡಾಪು ಗುತ್ತು, ದೂಮಣ್ಣ ಶೆಟ್ಟಿ ಕೊಡ್ಯಮ್ಮೆ ಗುತ್ತು, ನಾಗೇಶ್ ಕಾರ್ಲೆ, ರಾಮಚಂದ್ರ ಶೆಟ್ಟಿ ಬೀರಂಟಿಕೆರೆ ಮತ್ತು ರವಿಶಂಕರ್ ಸೀತಾಂಗೊಳಿ ಅವರನ್ನು ಆರಿಸಲಾಯಿತು.ಪ್ರಧಾನ ಕಾರ್ಯದರ್ಶಿಗಳಾಗಿ ಕೃಷ್ಣಪ್ಪ ಪೂಜಾರಿ ಶೇಣಿ, ಕಾರ್ಯದರ್ಶಿಗಳಾಗಿ ರವಿ ಪೂಜಾರಿ ಕೋಟೆಕ್ಕಾರ್, ಸುಬ್ಬಣ್ಣ ಬಂಬ್ರಾಣ ಬೈಲು, ಶಶಿ ಕುಂಬ್ಳೆ, ರಮೇಶ ರೈ ಕುಂಡಾಪು, ಪ್ರವೀಣ ಶೆಟ್ಟಿ ಜಾಲು, ರತ್ನಾಕರ ರೈ ಕುಂಡಾಪು, ಜಯಪ್ರಕಾಶ ಆಚಾರ್ಯ ಬಂಬ್ರಾಣ, ಸಂಜೀವ ಪೂಜಾರಿ ಜೋಡುಗೋಳಿ, ವಿನೋದ್ ಕುಮಾರ್ ಕೆ ಕುಂಬಳೆ, ಕೋಶಾಧಿಕಾರಿಯಾಗಿ ಅಜಯ ಕುಮಾರ್ ಆರಿಕ್ಕಾಡಿ ಎಂಬಿವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ದೈವಸ್ಥಾನದ ಪ್ರತಿಷ್ಠಾ ಮಹೋತ್ಸವ ಮತ್ತು ದೈವಗಳ ನೆಮೋತ್ಸವ ಮುಂದಿನ ವರ್ಷ ಮಾರ್ಚ್ 3 "ಗುರು ಪ್ರತಿಷ್ಠಾ ಪದ್ಧತಿಯ ಅನುಸಾರದಂತೆ" ನಡೆಸಲು ತೀರ್ಮಾನಿಸಲಾಗಿದೆ.
ದೈವ ನರ್ತಕÀ ಐತಪ್ಪ ಆರಿಕ್ಕಾಡಿ ಸ್ವಾಗತಿಸಿ, ಕೃಷ್ಣಪ್ಪ ಪೂಜಾರಿ ಶೇಣಿ ವಂದಿಸಿದರು.