HEALTH TIPS

ಮೀಯಪದವಲ್ಲಿ ಗಡಿನಾಡ ಸಾಂಸ್ಕøತಿಕ ಉತ್ಸವ ಸಂಪನ್ನ

           ಮಂಜೇಶ್ವರ: ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಆಯಾಮ ಬೆಂಗಳೂರು,ದ.ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ, ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆ ಮೀಯಪದವು ಇವರ ಸಂಯುಕ್ತ ಆಶ್ರಯದಲ್ಲಿ 'ಗಡಿನಾಡ ಸಾಂಸ್ಕøತಿಕ ಉತ್ಸವ’ ವಿಜೃಂಭಣೆಯಿಂದ ಜರಗಿತು. ಮೀಯಪದವು ಪೇಟೆಯ ಹೃದಯ ಭಾಗದಿಂದ ಆರಂಭಗೊಂಡ ಮೆರವಣಿಗೆಗೆ ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ಡಾ. ಡಿ.ಸಿ.ಚೌಟ ಅವರು ಚಾಲನೆ ನೀಡಿದರು. ವಿವಿಧ ಕಲಾ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರವಣಿಯ ಪ್ರಮುಖ ಆಕರ್ಷಣೆಯಾಗಿತ್ತು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿ ಮಾತನಾಡಿ,  ಬಹುಭಾμÁ ಸಂಗಮ ಭೂಮಿ ಕಾಸರಗೋಡಿನ ಭಾμÁ ವೈವಿಧ್ಯತೆಗಳ ಬಗ್ಗೆ ಮತ್ತು ಕನ್ನಡ ಅಸ್ಮಿತೆಯ ಮಹತ್ವವನ್ನು ತಿಳಿಸಿದರು. 


      ಕಾರ್ಯಕ್ರಮದಲ್ಲಿ ‘ಗಡಿನಾಡಿನಲ್ಲಿ ಶಿಕ್ಷಣ ಹಾಗೂ ಸಂಸ್ಕೃತಿ' ಎಂಬ ವಿಷಯದ ಬಗ್ಗೆ  ಶಿಕ್ಷಣ ತಜ್ಞ ಡಾ. ಶಿಕಾರಿಪುರ ಕೃಷ್ಣಮೂರ್ತಿ ಹಾಗೂ ಹಿರಿಯ ಕವಿ ರಾಧಾಕೃಷ್ಣ ಉಳಿಯತ್ತಡ್ಕ ಅವರು ವಿಶೇಷ ಉಪನ್ಯಾಸವನ್ನು ನೀಡಿದರು. ಗಡಿನಾಡ ಕನ್ನಡ ಪರ ಚಟುವಟಿಕೆ ಹಾಗೂ ಸವಾಲು ಮತ್ತು ಸಾಧ್ಯತೆಗಳ' ಬಗ್ಗೆ ನಡೆಸಿದ ಸಂವಾದದಲ್ಲಿ ಪ್ರೊ. ಪಿ ನಾರಾಯಣ ಮೂಡಿತ್ತಾಯ, ಡಾ. ರತ್ನಾಕರ ಮಲ್ಲಮೂಲೆ, ಟಿ.ಎ.ಎನ್ ಖಂಡಿಗೆ,  ಮೀನಾಕ್ಷಿ ರಾಮಚಂದ್ರ  ಭಾಗವಹಿಸಿದ್ದರು. ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರದಲ್ಲಿ ದುಡಿದು ಗಣನೀಯ ಸೇವೆ ಸಲ್ಲಿಸಿದ ಹಾಗೂ ಕನ್ನಡ ಪರ ಚಟುವಟಿಕೆಗೈದ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಕಲಾ, ಸಾಂಸ್ಕತಿಕ ಕಾರ್ಯಕ್ರಮ ನೆರೆದಿದ್ದವರ ಮನಸೂರೆಗೈದಿತು. 


      ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಮಂಜುನಾಥ ಎಸ್ ರೇವಣಕರ ವಹಿಸಿದ್ದರು. ಮುಖ್ಯ ಅತಿಥಿಗಳಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ ಗಡಿನಾಡಿನಲ್ಲಿ ಕನ್ನಡ ಭಾμÉಯ ಅನನ್ಯತೆ ಜೀವಂತವಾಗಿಡುವಲ್ಲಿ ಶಾಲೆಗಳು ವಹಿಸುತ್ತಿರುವ ಪಾತ್ರದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಭಾμÉ ಬಳಕೆಯ ಮೂಲಕ ಮಾತ್ರ ಉಳಿಯ ಬಲ್ಲದು. ಮಾತೃ ಭಾμÉಯ ಬಗ್ಗೆ ಕೀಳರಿಮೆ ಸಲ್ಲದು ಎಂದು ಅವರು ಅಭಿಪ್ರಾಯಪಟ್ಟರು. ವಿವಿಧ ಗಣ್ಯರು ಪಾಲ್ಗೊಂಡ ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ಸ್ವಾಗತಿಸಿ ಬೆಂಗಳೂರಿನ ರಂಗ ಕಲಾವಿದ ತಿಲಕ್ ರಾಜ್ ವಂದಿಸಿದರು. ರಾಜಾರಾಮ ರಾವ್ ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries