ತಿರುವನಂತಪುರ: ಅಟ್ಟುಕ್ಕಾಲ್ ಭಗವತಿ ದೇವಸ್ಥಾನ ಟ್ರಸ್ಟ್‍ನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ವಿ.ಶೋಭಾ ಆಯ್ಕೆಯಾಗಿರುವರು. ಮಹಿಳೆಯರ ಶಬರಿಮಲೆ ಎಂದೇ ಖ್ಯಾತವಾಗಿರುವ ಅಟ್ಟುಕ್ಕಾಲ್ ದೇವಸ್ಥಾನದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷೆಯಾಗಿದ್ದಾರೆ. ಕೆ.ಶರತ್‍ಕುಮಾರ್ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.
ಪ್ರಸ್ತುತ ಉಪಾಧ್ಯಕ್ಷೆಯಾಗಿದ್ದರು ವಿ.ಶೋಭಾ. 15ರಂದು ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದವರು ಅಧಿಕಾರ ಸ್ವೀಕರಿಸಲಿದ್ದಾರೆ. ಉಪಾಧ್ಯಕ್ಷರಾಗಿ ಪಿ.ಕೆ.ಕೃಷ್ಣನ್ ನಾಯರ್ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಅನುಮೋದ್ ಎ.ಎಸ್. ನೇಮಕವಾಗಿದ್ದಾರೆ. ಕಳೆದ ಬಾರಿ ಎ.ಗೀತಾಕುಮಾರಿ ಖಜಾಂಚಿಯಾಗಿ ಆಯ್ಕೆಯಾಗಿದ್ದರು.
ವಿ.ಶೋಭಾ ಅವರು ಕೆ.ಎಸ್.ಇ.ಬಿ.ಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದರು. ಇಲ್ಲಿಂದ ನಿವೃತ್ತರಾದ ನಂತರ ಟ್ರಸ್ಟ್ ನಲ್ಲಿ ಹೆಚ್ಚು ಕ್ರಿಯಾಶೀಲರಾದರು. ಪೊಂಗಲ್ ಹಬ್ಬದ ಪ್ರಚಾರ ಸಂಚಾಲಕಿ ಮತ್ತು ಉತ್ಸವದ ಮೊದಲ ಮಹಿಳಾ ಪ್ರಧಾನ ಸಂಚಾಲಕಿ ಎಂಬ ಸ್ಥಾನ ಅಲಂಕರಿಸಿದ್ದರು. ಎಸ್‍ಬಿಟಿಯಿಂದ ಮುಖ್ಯ ವ್ಯವಸ್ಥಾಪಕರಾಗಿ ನಿವೃತ್ತರಾದ ವಿವಿ ಕುಮಾರ್ ಇವರ ಪತಿ. ಅಪರ್ಣಾ ಇವರ ಪುತ್ರಿಯಾಗಿದ್ದಾರೆ.