HEALTH TIPS

ಐಸಿಸ್ ವಿರುದ್ಧ ರಾಜ್ಯ ತಕ್ಷಣ ಕ್ರಮ ಕೈಗೊಳ್ಳಬೇಕು: ಕೆಸಿಬಿಸಿ

                  ಕೊಚ್ಚಿ: ಭಯೋತ್ಪಾದಕ ಸಂಘಟನೆ ಐಸಿಸ್ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೇರಳ ಕ್ಯಾಥೋಲಿಕ್ ಬಿಷಪ್ ಕಾನ್ಫರೆನ್ಸ್(ಕೆಸಿಬಿಸಿ) ಆಗ್ರಹಿಸಿದೆ.

                ಕೇರಳದ ಈರ್ವರು ಐಎಸ್‍ನ ಸಕ್ರಿಯ ಕಾರ್ಯಕರ್ತರನ್ನು ಎರಡು ತಿಂಗಳಲ್ಲಿ ಬಂಧಿಸಲಾಗಿದ್ದು, ಜಗತ್ತಿಗೇ ಭೀತಿಕರವಾಗಿದೆ. ವಿಶ್ವಶಾಂತಿಗೆ ದೊಡ್ಡ ಸವಾಲಾಗಿರುವ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಐಎಸ್ ಕೇರಳದಲ್ಲಿ ಬೇರೂರಿದೆ ಎಂಬ ಸುದ್ದಿ ಆಘಾತಕಾರಿಯಾಗಿದೆ. ಈ ಆಘಾತವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ವಿಶ್ವಸಂಸ್ಥೆ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳ ಹಲವು ಸಕ್ರಿಯ ಕಾರ್ಯಕರ್ತರು ಕೇರಳ ಸೇರಿದಂತೆ ಭಾರತದ ರಾಜ್ಯಗಳಲ್ಲಿದ್ದಾರೆ ಮತ್ತು ಅವರು ಭಯೋತ್ಪಾದಕ ದಾಳಿಗಳನ್ನು ಯೋಜಿಸುತ್ತಿದ್ದಾರೆ ಎಂದು ಸೂಚಿಸುವ ವರದಿಗಳನ್ನು ಬಿಡುಗಡೆ ಮಾಡಿದೆ.

               ಆದರೂ ರಾಜ್ಯ ಸರ್ಕಾರವಾಗಲಿ ಅಥವಾ ಕೇರಳದ ಮುಖ್ಯವಾಹಿನಿಯ ಮಾಧ್ಯಮಗಳಾಗಲಿ ಇಂತಹ ಭಯೋತ್ಪಾದಕ ಚಟುವಟಿಕೆಗಳನ್ನು ತಮಗೆ ಅರ್ಹವಾದ ಪ್ರಾಮುಖ್ಯತೆಯೊಂದಿಗೆ ವರದಿ ಮಾಡಲು ಕಾಳಜಿ ವಹಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಪಾಪ್ಯುಲರ್ ಫ್ರಂಟ್ ನಂತಹ ಉಗ್ರಗಾಮಿ ಸಂಘಟನೆಗಳನ್ನು ನಿಷೇಧಿಸಲಾಗಿದ್ದರೂ, ಶಸ್ತ್ರಾಸ್ತ್ರ ತರಬೇತಿ ನೀಡಿದ ಆರೋಪದ ಮೇಲೆ ಮಂಚೇರಿಯ ಗ್ರೀನ್ ವ್ಯಾಲಿ ಅಕಾಡೆಮಿ ಸೇರಿದಂತೆ ಸಂಸ್ಥೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರೂ, ಉಗ್ರವಾದವನ್ನು ಪ್ರಚೋದಿಸುವ ಮತ್ತು ದೇಶದ ಏಕತೆಗೆ ಧಕ್ಕೆ ತರುವ ಚಟುವಟಿಕೆಗಳು ವಿವಿಧ ಹಂತಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಇಂದಿಗೂ ಕೂಡ ಭಯೋತ್ಪಾದಕ ಸಂಘಟನೆಗಳ ಬೆಂಬಲದೊಂದಿಗೆ ಕಪ್ಪುಹಣದ ವಹಿವಾಟು, ಚಿನ್ನದ ಕಳ್ಳಸಾಗಣೆ, ಮಾದಕ ದ್ರವ್ಯ ದಂಧೆ ಕೇರಳವನ್ನು ಕಾಡುತ್ತಿದೆ.

               ಅಂತಹ ವಹಿವಾಟುಗಳು ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಸಾಧನವಾಗಿದೆ ಎಂದು ಅಂತರರಾಷ್ಟ್ರೀಯ ಸಂಸ್ಥೆಗಳು ಘೋಷಿಸಿವೆ. ಆದರೂ ಕೇರಳದಲ್ಲಿ ಅಂತಹ ಯಾವುದೇ ತನಿಖೆಯಾಗಲಿ, ವಿಚಾರಣೆಯಾಗಲಿ ನಡೆಯದಿರುವುದು ಇಲ್ಲಿನ ಸರ್ಕಾರಿ ವ್ಯವಸ್ಥೆಗಳ ನಿಷ್ಕ್ರಿಯತೆಯನ್ನು ಬಯಲಿಗೆಳೆಯುತ್ತದೆ ಎಂದು ಕೆಸಿಬಿಸಿ ಹೇಳಿಕೆಯಲ್ಲಿ ಗಮನಸೆಳೆದಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries