ಕಾಸರಗೋಡು: ಕೂಡ್ಲು ಕಾಳ್ಯಂಗಾಡು ಶ್ರೀ ಜಗದಂಬಾ ಕ್ಷೇತ್ರದಲ್ಲಿ ನೂತನ ಬಿಂಬ ಪ್ರತಿಷ್ಠೆ ನವೀಕರಣ ಬ್ರಹ್ಮಕಲಶೋತ್ಸವ ಮುಂದಿನ 2024 ಫೆಬ್ರವರಿ ತಿಂಗಳಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಶ್ರೀ ಕ್ಷೇತ್ರದಲ್ಲಿ ಸೇರಿದ ಸಭೆಯಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಮಾರ್ಗದರ್ಶನ ನೀಡಿದರು. ಪುರೋಹಿತ ನಾಗೇಂದ್ರ ಭಟ್, ಹಿರಿಯ ಉದ್ಯಮಿ ಬಿ.ವಸಂತ ಪೈ ಬದಿಯಡ್ಕ, ಕಿರಣ್ ಮಾಸ್ತರ್ ಕೂಡ್ಲು, ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಕೆ.ಗೋಪಾಲಕೃಷ್ಣ, ಸದಸ್ಯರಾದ ಯಶೋದಾ, ಎಸ್.ಕುಮಾರ್, ಚಂದ್ರಹಾಸ ಮಾಸ್ತರ್ ಕೂಡ್ಲು, ವೆಂಕಟ್ರಮಣ ಅಡಿಗ, ಮಹಾಬಲ ರೈ ಮೊದಲಾದವರು ಮಾತನಾಡಿದರು.
ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಾಳ್ಯಂಗಾಡ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯನ್ನು ರೂಪೀಕರಿಸಲಾಯಿತು. ಕೆ.ಸುರೇಶ ಕಾಳ್ಯಂಗಾಡು ಸ್ವಾಗತಿಸಿದರು. ಮೋಹನ ಕಾಳ್ಯಂಗಾಡು ವಂದಿಸಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.