ತ್ರಿಶೂರ್: ಮಹಿಳಾ ಮೀಸಲಾತಿ ಮಸೂದೆಗೆ ಒಗ್ಗಟ್ಟಿನಿಂದ ಬೆಂಬಲ ಸೂಚಿಸಿ ಮಹಿಳೆಯರ ಗುಂಪೊಂದು ತ್ರಿಶೂರ್‍ನಿಂದ ವಂದೇಭಾರತ್ ಯಾತ್ರೆ ಕೈಗೊಂಡಿತು.
ಪ್ರಧಾನಮಂತ್ರಿಯವರು ಕೇರಳಕ್ಕೆ ಸಮರ್ಪಿಸಿರುವ ನೂತನ ವಂದೇಭಾರತದಲ್ಲಿ ವಿವಿಧ ಸಾಂಸ್ಕøತಿಕ ಕ್ಷೇತ್ರಗಳ ಮಹಿಳೆಯರ ತಂಡವು ಹೊರಟಿತು. ಎರಡನೇ ವಂದೇಭಾರತ್ ರೈಲಿನಲ್ಲಿ ಮಹಿಳೆಯರು ತಮ್ಮ ಪ್ರಯಾಣವನ್ನು ಆಚರಿಸಿದರು. ಪ್ರಧಾನಮಂತ್ರಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಹಿಳೆಯರು ತಿರುವನಂತಪುರಕ್ಕೆ ಹಿಂತಿರುಗುವ ರೈಲಿನಲ್ಲಿ ತ್ರಿಶೂರ್‍ನಿಂದ ಎರ್ನಾಕುಳಂಗೆ ಪ್ರಯಾಣಿಸಿದರು.
ಮೊನ್ನೆ ಮಹಿಳಾ ಮೀಸಲಾತಿ ಮಸೂದೆಯನ್ನು ಉಭಯ ಸದನಗಳಲ್ಲಿ ವಿರೋಧವಿಲ್ಲದೆ ಅಂಗೀಕರಿಸಲಾಗಿತ್ತು. ನಂತರ, ಅನೇಕ ಜನರು ಕೇಂದ್ರಕ್ಕೆ ಬೆಂಬಲ ಸೂಚಿಸಿ ಅ|ಭಿನಂದಿಸಿದ್ದರು. ದಶಕಗಳ ಹೋರಾಟದ ನಂತರ ಮಸೂದೆಯನ್ನು ಸಾಕಾರಗೊಳಿಸಿದ್ದಕ್ಕಾಗಿ ಮಹಿಳೆಯರು ಪ್ರಧಾನಿ ಮತ್ತು ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತಿದ್ದಾರೆ.