HEALTH TIPS

ಅಬಾಟ್ ಇಂಡಿಯಾದ ಆಂಟಾಸಿಡ್ 'ಡೈಜಿನ್ ಜೆಲ್' ಬಳಸದಂತೆ ಡಿಸಿಜಿಐ ಎಚ್ಚರಿಕೆ

             ವದೆಹಲಿ: ಔಷಧ ಉತ್ಪಾದಕ ಕಂಪನಿ ಅಬಾಟ್ ಇಂಡಿಯಾದ ಆಂಟಾಸಿಡ್ 'ಡೈಜಿನ್ ಜೆಲ್' ಬಳಕೆಯನ್ನು ನಿಲ್ಲಿಸುವಂತೆ ಭಾರತೀಯ ಔಷಧ ಮಹಾನಿಯಂತ್ರಕರಾದ(ಡಿಸಿಜಿಐ) ರಾಜೀವ್ ಸಿಂಗ್ ರಘುವಂಶಿ ಅವರು ಜನರಿಗೆ ಸಲಹೆ ನೀಡಿದ್ದಾರೆ.

            ಗೋವಾ ಘಟಕದಲ್ಲಿ ತಯಾರಿಸಿರುವ ಮಿಂಟ್ ಫ್ಲೇವರ್‌ನ ಡೈಜಿನ್ ಜೆಲ್‌ನ ಒಂದು ಬಾಟಲ್‌ನ ರುಚಿ ಎಂದಿನಂತೆ ಸಿಹಿಯಾಗಿದ್ದು, ತಿಳಿ ಗುಲಾಬಿ ಬಣ್ಣದಲ್ಲಿದೆ.

               ಆದರೆ, ಅದೇ ಬ್ಯಾಚ್‌ನ ಮತ್ತೊಂದು ಬಾಟಲಿಯ ರುಚಿ ಕಹಿಯಾಗಿದ್ದು, ಕೆಟ್ಟ ವಾಸನೆಯ ಜೊತೆಗೆ ಬಿಳಿ ಬಣ್ಣದಿಂದ ಕೂಡಿದೆ ಎಂದು ಆಗಸ್ಟ್ 9ರಂದು ಬಂದ ದೂರಿನ ಅನ್ವಯ ಡಿಸಿಜಿಐನಿಂದ ಎಚ್ಚರಿಕೆ ನೀಡಲಾಗಿದೆ.

                  ಗೋವಾ ಘಟಕದಲ್ಲಿ ತಯಾರಿಸಲಾದ ಈ ಉತ್ಪನ್ನವು ಅಸುರಕ್ಷಿತವಾಗಿರಬಹುದು ಮತ್ತು ಅದರ ಬಳಕೆಯು ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

'ವೈದ್ಯರು ಮತ್ತು ಆರೋಗ್ಯ ವೃತ್ತಿಪರರು ತಮ್ಮ ರೋಗಿಗಳಿಗೆ ಈ ಟಾನಿಕ್ ಅನ್ನು ಬಳಕೆಗೆ ಸೂಚಿಸುವಾಗ ಎಚ್ಚರಿಕೆ ವಹಿಸಬೇಕು. ಈ ಉತ್ಪನ್ನದ ಸೇವನೆಯನ್ನು ನಿಲ್ಲಿಸುವಂತೆ ಮತ್ತು ಈಗಾಗಲೇ ಬಳಸಿದ್ದರೆ ಅದರಿಂದ ಉಂಟಾಗುವ ಯಾವುದೇ ಪ್ರತಿಕೂಲ ಪರಿಣಾಮದ ಬಗ್ಗೆ ವರದಿ ಮಾಡುವಂತೆ ರೋಗಿಗಳಿಗೆ ಅರಿವು ಮೂಡಿಸಬೇಕು. ಈ ಔಷಧ ಬಳಸಿ ತೊಂದರೆಗೀಡಾದ ಯಾವುದೇ ಅನುಮಾನಾಸ್ಪದ ಪ್ರಕರಣಗಳು ಕಂಡುಬಂದರೆ ಆರೋಗ್ಯ ವೃತ್ತಿಪರರು ತಕ್ಷಣವೇ ವರದಿ ಮಾಡಬೇಕು'ಎಂದು ಡಾ ರಘುವಂಶಿ ಅವರು ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

                 ಮಾರುಕಟ್ಟೆಯಲ್ಲಿಈ ಔಷಧದ ಸರಬರಾಜು, ಮಾರಾಟ, ದಾಸ್ತಾನು ಕುರಿತಂತೆ ಎಚ್ಚರಿಕೆ ವಹಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಸೂಚಿಸಲಾಗಿದೆ. ಒಂದೊಮ್ಮೆ ಈ ಔಷಧಧ ವ್ಯಾಪಾರ ಕಂಡುಬಂದರೆ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ.

                  ಈ ನಡುವೆ, ಅಬಾಟ್ ಇಂಡಿಯಾ ಕಂಪನಿಯು ಆಗಸ್ಟ್ 11ರಂದು ಡಿಸಿಜಿಐಗೆ ಬರೆದ ಪತ್ರದಲ್ಲಿ ಸ್ವಯಂಪ್ರೇರಣೆಯಿಂದ ಈ ಉತ್ಪನ್ನವನ್ನು ಹಿಂಪಡೆದಿದ್ದು, ತಮ್ಮ ಗೋವಾ ಘಟಕದ ಡೈಜಿನ್ ಜೆಲ್‌ನ ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಎಂದು ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries