HEALTH TIPS

ನಿಪಾ ತುರ್ತು: ತಪಾಸಣೆಗಾಗಿ ಕೋಝಿಕ್ಕೋಡ್ ತಲಪಿದ ಮೊಬೈಲ್ ಘಟಕಗಳು: ಕೇಂದ್ರದಿಂದ ತಂಡ

                  ನವದೆಹಲಿ: ಕೋಝಿಕ್ಕೋಡ್‍ನಲ್ಲಿ ನಿಪಾ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಕೇರಳಕ್ಕೆ ಎಲ್ಲ ರೀತಿಯ ನೆರವು ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ಮಾಹಿತಿ ನೀಡಿದರು.

                    ಪುಣೆಯಲ್ಲಿರುವ ಐಸಿಎಂಆರ್ - ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಭೇಟಿ ನೀಡಿ ಕಾರ್ಯವಿಧಾನಗಳನ್ನು ಪರಿಶೀಲಿಸಿದ ನಂತರ, ಈ ಬಗ್ಗೆ ಡಾ. ಭಾರತಿ ಪವಾರ್ ಮಾಹಿತಿ ನೀಡಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವ್ಯ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಮತ್ತು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿಯ ಉನ್ನತ ಮಟ್ಟದ ತಂಡಗಳು ಈಗಾಗಲೇ ಬಿ.ಎಸ್.ಎಲ್. 3 ಪ್ರಯೋಗಾಲಯಗಳೊಂದಿಗೆ ಮೊಬೈಲ್ ಘಟಕಗಳೊಂದಿಗೆ ಕೋಝಿಕ್ಕೋಡ್ ತಲುಪಿವೆ.

             ತಂಡ ಪರಿಶೀಲನೆಯಲ್ಲಿ ತೊಡಗಿಕೊಂಡಿದೆ.  ಕೋಝಿಕ್ಕೋಡ್ ಪ್ರದೇಶದ ಪೀಡಿತ ಗ್ರಾಮ ಪಂಚಾಯತ್ ಗಳನ್ನು ಕ್ವಾರಂಟೈನ್ ವಲಯಗಳಾಗಿ ಘೋಷಿಸಲಾಗಿದೆ. ನಿಪಾವನ್ನು ಎದುರಿಸಲು ಸಾರ್ವಜನಿಕ ಆರೋಗ್ಯ ಕ್ರಮಗಳಲ್ಲಿ ರಾಜ್ಯವನ್ನು ಬೆಂಬಲಿಸಲು  ಕೇಂದ್ರ ಆರೋಗ್ಯ ಸಚಿವಾಲಯವು ಡಾ. ಮಾಲಾ ಛಾಬ್ರಾ ನೇತೃತ್ವದ ಬಹುಶಿಸ್ತೀಯ ತಂಡವನ್ನು ನೇಮಿಸಿದೆ ಎಂದು ಅವರು ಹೇಳಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries