ಗುರುವಾಯೂರು: ಗುರುವಾಯೂರು ದೇವಸ್ಥಾನದ ಟಿಕೆಟ್ ಕೌಂಟರ್‍ಗೆ ಎಕೆಜಿ ಕೌಂಟರ್ ಎಂದು ನಾಮಕರಣ ಮಾಡಲಾಗಿದ್ದು, ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ.
ದೇವಸ್ಥಾನವನ್ನು ಮಾಕ್ರ್ಸ್‍ವಾದಿ ಮಾಡುವ ಹುನ್ನಾರದ ವಿರುದ್ಧ ವಿವಿಧ ಭಕ್ತ ಸಂಘಟನೆಗಳಿಂದ ತೀವ್ರ ಪ್ರತಿಭಟನೆಗಳು ವ್ಯಕ್ತವಾಗಿವೆ. ಮೊನ್ನೆ ಭಕ್ತರೊಬ್ಬರು ಸ್ವೀಕರಿಸಿದ ಕಾಣಿಕೆ ಟಿಕೆಟ್‍ನಲ್ಲಿ ಎಕೆಜಿ ಕೌಂಟರ್ ಎಂದು ಗುರುತಿಸಲಾದ ಟಿಕೆಟ್ ಪತ್ತೆಯಾಗಿದೆ. ಸಂದೇಹದಿಂದ ವಿಚಾರಿಸಿದ ಭಕ್ತನಿಗೆ ಕೌಂಟರ್ ಕ್ಲರ್ಕ್ ನಿಂದ ‘ನಿನ್ನ ಕಾಣಿಕೆ ಕೊಟ್ಟರೆ ಸಾಕಲ್ಲ’ ಎಂಬ ಉತ್ತರ ಬಂತು.
ತಿಂಗಳ ಹಿಂದೆ ಗುರುವಾಯೂರು ದೇವಸ್ವಂ ಕಚೇರಿಯಲ್ಲಿ ಕೆಲವು ಕಮ್ಯುನಿಸ್ಟ್ ನಾಯಕರ ಚಿತ್ರವನ್ನು ಪ್ರದರ್ಶಿಸಲಾಗಿದ್ದು, ಪ್ರತಿಭಟನೆಯ ನಂತರ ಅದನ್ನು ತೆಗೆಯಲಾಗಿತ್ತು. ಆಡಳಿತ ಮಂಡಳಿ ಮತ್ತು ದೇವಸ್ವಂ ನಿರ್ವಾಹಕರು ಸಿಪಿಎಂ ನಾಮನಿರ್ದೇಶಿತರಾಗಿದ್ದಾರೆ. ಅವರ ಸೂಚನೆ ಅಥವಾ ಅನುಮತಿಯಿಲ್ಲದೆ ಇಂತಹ ಅಪಸವ್ಯಗಳು ಸೃಷ್ಟಿಯಾಗಲು ಸಾಧ್ಯತೆ ಇಲ್ಲ ಎಂದು ಭಕ್ತರು ಆರೋಪಿಸಿದ್ದಾರೆ. ಅಲ್ಲದೆ, ಗುರುವಾಯೂರು ದೇವಸ್ವಂನÀಲ್ಲಿ ಸಿಪಿಎಂ ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಮತ್ತು ಶಾಖಾ ಸಮಿತಿಯ ಪದಾಧಿಕಾರಿಗಳನ್ನು ಹಂಗಾಮಿ ನೌಕರರನ್ನಾಗಿ ನೇಮಿಸಲಾಗಿದೆ.
ಹಲವು ವಿಚಾರಗಳಲ್ಲಿ ಗುರುವಾಯೂರು ದೇವಸ್ವಂ ವಿರುದ್ಧ ಹೈಕೋರ್ಟ್ ಮಧ್ಯಪ್ರವೇಶಿಸಬೇಕಾಗಿದ್ದು, ಭಕ್ತರ ಆತಂಕವನ್ನು ಹೆಚ್ಚಿಸುತ್ತಿದೆ. ಸೋಪಾನ ಸಂಗೀತಕ್ಕೆ ಬಾಲಸಂಘದ ರಾಜ್ಯ ಪದಾಧಿಕಾರಿಯನ್ನು ನೇಮಿಸಲಾಗಿದೆ. ಹಂಗಾಮಿ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿದ ಅವರು ಮೇಲಧಿಕಾರಿಯನ್ನು ಧಿಕ್ಕರಿಸಿದ್ದಕ್ಕೆ ಕೆಲಸದಿಂದ ವಜಾಗೊಳಿಸಿದ್ದರು. ಆದರೆ ಯಾವುದೇ ವಿಳಂಬ ಮಾಡದೆ ಎಲ್ಲ ಮಾನದಂಡಗಳನ್ನು ಮೀರಿ ಹೆಚ್ಚಿನ ಬಲದೊಂದಿಗೆ ಕಾಯಂ ನೌಕರನಾಗಿ ಮರುಸೇರ್ಪಡೆಗೊಂಡರು. ಪಕ್ಷದ ಮಟ್ಟದಲ್ಲಿ ನೇಮಕವಾಗಲು ದೇವಸ್ಥಾನದಲ್ಲಿ ಮೇಲ್ಶಾಂತಿ ಮಾತ್ರ ಉಳಿದುಕೊಂಡಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗುರುವಾಯೂರು ದೇವಸ್ಥಾನದಲ್ಲಿನ ಕಾಣಿಕೆ ಕೌಂಟರ್‍ಗಳಿಗೆ ವಿಶೇಷ ಹೆಸರು ಇಡುವ ಪ್ರಚಾರ ನಿರಾಧಾರ ಮತ್ತು ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ದೇವಸ್ವಂ ಅಧ್ಯಕ್ಷ ಡಾ. ವಿ.ಕೆ. ವಿಜಯನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರ ಹಿಂದೆ ದೇವಾಲಯದ ಮಾನಹಾನಿ ಮಾಡುವ ಹೇಯ ಪ್ರಯತ್ನವಿದೆ. ಗಣಕೀಕೃತ ವ್ಯವಸ್ಥೆಯಲ್ಲಿ ಟಿಕೆಟ್ ಕೌಂಟರ್‍ನಲ್ಲಿ ಭಕ್ತರ ಕಾಣಿಕೆಯನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ಕ್ಲರ್ಕ್‍ಗಳು ಕೆಲಸಕ್ಕೆ ಹೋದಾಗ ಅವರ ಯೂಸರ್ ಐಡಿ ಮತ್ತು ಪಾಸ್‍ವರ್ಡ್ ಬಳಸಿ ಸಾಫ್ಟ್‍ವೇರ್ ಅನ್ನು ರನ್ ಮಾಡುತ್ತಾರೆ. ಕಂಪ್ಯೂಟರ್ ಅನ್ನು ಬಳಸಲು, ಗುಮಾಸ್ತರ ಹೆಸರು ಮತ್ತು ಮೊದಲಕ್ಷರಗಳ ಇಂಗ್ಲಿಷ್ ಸಂಕ್ಷೇಪಣವನ್ನು ಬಳಕೆದಾರರ ಹೆಸರಾಗಿ ನೀಡಲಾಗುತ್ತದೆ. ಅದರಂತೆ ಕೆಲವರು ರಾಜಕೀಯ ಲಾಭಕ್ಕಾಗಿ ಗುಮಾಸ್ತ ಅಜಿತಕುಮಾರ್ ಗುರುವಾಯೂರು ನೀಡಿದ ಟಿಕೆಟ್ ನಲ್ಲಿ ಎಕೆಜಿ ಅವರನ್ನು ನೋಡಿ ಅಪಪ್ರಚಾರ ಮಾಡಿದ್ದಾರೆ ಎನ್ನಲಾಗಿದೆ.
ಎಕೆಜಿ ಎಂಬುದು ಅಜಿತ್ ಕುಮಾರ್ ಗುರುವಾಯೂರ್ ಅವರ ಇಂಗ್ಲಿಷ್ ಸಂಕ್ಷೇಪಣ ಎಂದು ದೇವಸ್ವಂ ಅಧ್ಯಕ್ಷರು ಹೇಳಿಕೊಂಡಿದ್ದಾರೆ.