ಕಾಸರಗೋಡು: ಜಿಲ್ಲೆಯಲ್ಲಿ ಶಾಲಾ ವಾಹನಗಳು ಅತಿಯಾದ ಸಂಖ್ಯೆಯಲ್ಲಿ ಮಕ್ಕಳನ್ನು ಹೇರಿಕೊಂಡು ಸಾಗುತ್ತಿರುವ ಹಿನ್ನೆಲೆಯಲ್ಲಿ ಹೊಸದುರ್ಗ ತಾಲೂಕಿನ ಕಂದಾಯ ಹಾಗೂ ಕಾಸರಗೋಡು ಆರ್.ಟಿ.ಓ. ಎನ್‍ಫೋರ್ಸ್‍ಮೆಂಟ್ ಜಂಟಿಯಗಿ ನಡೆಸಿದ ಕಾನೂನು ಉಲ್ಲಂಘಿಸಿ ಸಂಚಾರ ನಡೆಸುತ್ತಿದ್ದ 28ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, 11ಸಾವಿರ ರಊ. ದಂಡ ವಸೂಲಿ ಮಾಡಲಾಗಿದೆ. ಹೊಸದುರ್ಗ ತಾಲೂಕಿನಲ್ಲಿ 16ಶಾಲಾ ವಾಹನಗಳನ್ನು ತಪಾಸಣೆಗೊಳಪಡಿಸಲಾಗಿದೆ. ಇದರಲ್ಲಿ ಒಂದು ವಾಃನದಲ್ಲಿ ನಿಗದಿತ ಸಂಕ್ಯೆಗಿಂತ ಹೆಚ್ಚು ಮಕ್ಕಳನ್ನು ಹೇರಲಾದ ಹಿನ್ನೆಲೆಯಲ್ಲಿ ಒಂದುವರೆ ಸಆವಿರ ರಊ. ದಂಡ ವಿಧಿಸಲಾಗಿದೆ.
ಕಾಸರಗೋಡು ತಾಲೂಕಿನಲ್ಲಿ ಆರ್‍ಡಿಒ ಅತುಲ್ ಎಸ್.ನಾಥ್ ನೇತೃತ್ವದಲ್ಲಿ ಹಾಗೂ ಹೊಸದುರ್ಗ ತಾಲೂಕಿನಲ್ಲಿ ಅಪರ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್ ನೇತೃತ್ವದಲ್ಲಿ ತಪಾಸಣೆ ನಡೆದಿತ್ತು. ಜಾಯಿಂಟ್ ಆರ್‍ಟಿಒ ಬಿಜು, ಮೋಟಾರು ವಾಹನ ನಿರೀಕ್ಷಕರಾದ ಸಾಜು ಫ್ರಾನ್ಸಿಸ್, ಜಯನ್ ಹಾಗೂ ಎಎಂವಿಎಂಗಳಾದ ಸಿ.ವಿ.ಜಿಜೋ ವಿಜಯ್, ಸುಧೀಶ್, ಪಿ.ವಿ.ವಿಜೇಶ್, ವಿನೀತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾಸರಗೋಡು ತಾಲೂಕಿನಲ್ಲಿ 12 ವಾಹನಗಳನ್ನು ತಪಾಸಣೆಗೊಳಪಡಿಸಲಾಗಿದ್ದು, ಇದರಲ್ಲಿ ಎಂಟು ವಾಹನಗಳಲ್ಲಿ ನಿಗದಿತ ಸಂಕ್ಯೆಗಿಂತ ಹೆಚ್ಚಿನ ಮಕ್ಕಳನ್ನು ಸಾಗಿಸುತ್ತಿರುವುದನ್ನು ಪತ್ತೆಮಾಡಲಾಗಿತ್ತು. ಮೋಟಾರು ವಾಹನ ನಿರೀಕ್ಷಕ ಚಂದ್ರಕುಮಾರ್, ಎಎಂವಿಐ ಎಂ.ಪ್ರವೀಣ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.