ಕಾಸರಗೋಡು: ಬ್ರಹ್ಮೈಕ್ಯ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಮೂರನೇ ವಾರ್ಷಿಕ ಆರಾಧನಾ ಮಹೋತ್ಸವ ಇಂದು(ಸೆ. 3) ಶ್ರೀಮಠದಲ್ಲಿ ಜರುಗಲಿದೆ. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರುಗಲಿದೆ.
ಬೆಳಗ್ಗೆ 7ಕ್ಕೆ ಮಹಾಪೂಜೆ, 9ಕ್ಕೆ ಧ್ವಜಾರೋಹಣ, 9.30ಕ್ಕೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ವೃಂದಾವನ ಪೂಜೆ, ಮಧ್ಯಾಹ್ನ 2.30ಕ್ಕೆ ಆರಾಧನಾ ಮಹೋತ್ಸವ ನಡೆಯುವುದು. ಸಂಜೆ 4ಕ್ಕೆ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ'ಪಂಚವಟಿ-ತ್ರಿಶಂಕು ಸ್ವರ್ಗ-ಶಾಂಭವಿ ವಿಜಯ-ನಾಗಾಸ್ತ್ರ' ಯಕ್ಷಗಾನ ಬಯಲಾಟ, ಸಂಜೆ 7ಕ್ಕೆ ಮಹಾಪೂಜೆ, ವೃಂದಾವನ ಪೂಜೆ ನಡೆಯುವುದು.