ಬದಿಯಡ್ಕ : ವೀಣಾವಾದಿನಿ ಸಂಗೀತ ವಿದ್ಯಾಪೀಠಂನ ನೇತೃತ್ವದಲ್ಲಿ ಬದಿಯಡ್ಕ ಸಮೀಪದ ಪುಳಿತ್ತಡಿಯ ಬಳ್ಳಪದವು ನಾರಾಯಣೀಯಂ ಸಂಗೀತ ಶಾಲೆಯಲ್ಲಿ ಇಂದು (ಸೆ.23) ಸಂಜೆ 4ರಿಂದ ವೀಣಾವಾದಿನಿ ಸತ್ ಸಂಗೀತಂ ಕಾರ್ಯಕ್ರಮ ನಡೆಯಲಿದೆ. ರೇವತಿ ಕಾಮತ್ ಮತ್ತು ಬಳಗದವರಿಂದ ವೀಣಾವಾದನ ನಡೆಯಲಿದೆ. ಕಾರ್ಯಕ್ರಮದಲ್ಲಿ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್, ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.