ಕುಂಬಳೆ: ಪುತ್ತಿಗೆ ಮುಹಿಮ್ಮಾತ್ ಮದ್‍ಹೂರಸೂಲ್ ಫೌಂಡೇಶನ್ ವತಿಯಿಂದ ಒಂದು ತಿಂಗಳ ಕಾಲ ನಡೆಯುವ ಮೀಲಾದ್ ಕಾರ್ಯಕ್ರಮಕ್ಕೆ ಕಾಸರಗೋಡಿನಲ್ಲಿ ವಿಜೃಂಭಣೆಯ ಘೋಷಣಾ ರ್ಯಾಯಾಲಿ ನಡೆಯಿತು. ಕಾಸರಗೋಡು ವಲಯ ಕೇರಳ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಸಂಘಟನೆಗಳ ಸಹಯೋಗದೊಂದಿಗೆ ನಡೆದ ರ್ಯಾಲಿಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ದಫ್, ಸ್ಕೌಟ್ ಮುಂತಾದ ಸಂಘಗಳ ಆಕರ್ಷಕ ಕವಾಯತು ನಡೆಯಿತು.
ತಿರುನೆಬಿ (ಸ) ಅವರ ಸ್ನೇಹ ಲೋಕ ಎಂಬ ಸಂದೇಶದೊಂದಿಗೆ ಕೇರಳ ಮುಸ್ಲಿಂ ಜಮಾಅತ್ ಆಯೋಜಿಸಿದ ಮೀಲಾದ್ ಕಾರ್ಯಕ್ರಮದಲ್ಲಿ ನೆಲ್ಲಿಕುನ್ನಿನಿಂದ ತಳಂಗರೆ ತನಕ ಮುಹಿಮ್ಮಾತ್ ಘೋಷಣಾ ರ್ಯಾಯಾಲಿ ಜರುಗಿತು. ನೆಲ್ಲಿಕುನ್ನ್ ಮಖಾಂ ಝಿಯಾರತಿಗೆ ಸಯ್ಯಿದ್ ಹಸನ್ ಅಹ್ದಲ್ ತಂಙಳ್ ನೇತೃತ್ವ ನೀಡಿದರು. ಶಾಸಕ ಎನ್ ಎ ನೆಲ್ಲಿಕುನ್ನು ರ್ಯಾಲಿಉದ್ಘಾಟಿಸಿದರು. ಸಯ್ಯಿದ್ ಹಸನ್ ಅಹ್ದಲ್ ತಂಙಳ್, ಬಿ.ಎಸ್. ಅಬ್ದುಲ್ಲ ಕುಞÂ ಫೈಝಿ ಮೊದಲಾದ ಪ್ರಮುಖರು ನೇತೃತ್ವ ನೀಡಿದರು. ಪಲ್ಲಂ ಟ್ರಾಫಿಕ್ ಜಂಕ್ಷನ್ ಮೂಲಕ ಪ್ರವಾದಿ ಪ್ರಕೀರ್ತನೆ ಗೀತೆಗಳು, ಬೈತ್ ಮತ್ತು ಅರೇಬಿಕ್ ನಶೀದ್‍ಗಳೊಂದಿಗೆ ತಾಯಲಂಗಡಿ ಮೂಲಕ ಸಾಗಿಬಮದ ರ್ಯಾಲಿ ತಳಂಗರೆ ಮಾಲಿಕುದೀನಾರ್ ಮಸೀದಿ ವಠಾರದಲ್ಲಿ ಸಂಪನ್ನಗೊಂಡಿತು.
ಕೇರಳ ಮುಸ್ಲಿಂ ಜಮಾಅತ್ ಮೀಲಾದ್ ಅಭಿಯಾನದ ಅಂಗವಾಗಿ ಮುಹಿಮ್ಮಾತಿನಲ್ಲಿ ಒಂದು ತಿಂಗಳ ಕಾಲ ಕಾರ್ಯಕ್ರಮಗಳು ನಡೆಯಲಿದೆ. ಪ್ರವಾದಿಯವರ ಜನ್ಮ ತಿಂಗಳಾದ ರಬೀವುಲ್ ಅವ್ವಲ್ ಒಂದರಿಂದ ಹನ್ನೆರಡರ ವರೆಗೆ ಮುಹಿಮ್ಮಾತಿನಲ್ಲಿ ಪ್ರಕೀರ್ತನಾ ಕಾರ್ಯಕ್ರಮ ನಡೆಯಲಿದೆ.