ನಾಗ್ಪುರ: 'ಇಂದಿನ ಯುವ ಜನಾಂಗಕ್ಕೆ ವಯಸ್ಸಾಗುವುದಕ್ಕೂ ಮೊದಲು ಅಖಂಡ ಭಾರತ (ಅವಿಭಜಿತ ಭಾರತ) ಸಾಕಾರಗೊಳ್ಳಬೇಕಿದೆ' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.
ನಾಗ್ಪುರ: 'ಇಂದಿನ ಯುವ ಜನಾಂಗಕ್ಕೆ ವಯಸ್ಸಾಗುವುದಕ್ಕೂ ಮೊದಲು ಅಖಂಡ ಭಾರತ (ಅವಿಭಜಿತ ಭಾರತ) ಸಾಕಾರಗೊಳ್ಳಬೇಕಿದೆ' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.
ಇಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಖಂಡ ಭಾರತ ಯಾವಾಗ ಅಸ್ತಿತ್ವ ಬರಲಿದೆ ಎಂಬ ಬಗ್ಗೆ ಅವರು ವಿವರಿಸಲಿಲ್ಲ.
'ಇದನ್ನು ಸಾಕಾರಗೊಳಿಸುವ ಹಾದಿಯಲ್ಲಿ ಸಾಗಿದರೆ ನಿಮಗೆ ವಯಸ್ಸಾಗುವುದರಲ್ಲಿ ಅದನ್ನು ಕಾಣಬಹುದು. ಭಾರತದಿಂದ ಬೇರ್ಪಟ್ಟವರಿಗೂ ತಮ್ಮ ತಪ್ಪಿನ ಅರಿವಾಗಿದೆ. ನಾವು ಮತ್ತೆ ಭಾರತದ ಭಾಗವಾಗಬೇಕು ಎಂದು ಅವರು ಭಾವಿಸಿದ್ದಾರೆ ಎಂದರು.
1950ರಿಂದ 2002ರ ವರೆಗೆ ಆರ್‌ಎಸ್‌ಎಸ್‌ನ ಮುಖ್ಯ ಕಚೇರಿ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿಲ್ಲ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಆಗಸ್ಟ್ 15 ಮತ್ತು ಜನವರಿ 26ರಂದು ನಾಗ್ಪುರದಲ್ಲಿರುವ ಸಂಘಟನೆಯ ಎರಡು ಕ್ಯಾಂಪಸ್‌ನಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದ್ದೇವೆ. ಈ ಬಗ್ಗೆ ಯಾರೊಬ್ಬರು ನಮ್ಮನ್ನು ಪ್ರಶ್ನಿಸುವಂತಿಲ್ಲ' ಎಂದರು.