ಕೋಝಿಕ್ಕೋಡ್: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕೋಝಿಕ್ಕೋಡಿನಲ್ಲಿ ಬುಧವಾರ ನಡೆದ ಶೋಭಾಯಾತ್ರೆಯಲ್ಲಿ ಮುದ್ದು ಕೃಷ್ಣನಾಗಿ ಮುಹಮ್ಮದ್ ಯಾಹಿಯಾ ಎಂಬ ಬಾಲಕ ಗಮನ ಸೆಳೆದಿದ್ದಾನೆ. ಕೋಝಿಕ್ಕೋಡ್ ನಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ 3ನೇ ತರಗತಿ ವಿದ್ಯಾರ್ಥಿಯಾದ ಈತ ದಿವ್ಯಾಂಗನೂ ಹೌದು.
ಯಾಹಿಯಾ ತನ್ನ ಅಜ್ಜಿ ಫರೀದಾ ಅವರೊಂದಿಗೆ ಗಾಲಿಕುರ್ಚಿಯಲ್ಲಿ ಕೃಷ್ಣನ ವೇಷಧರಿಸಿ ಗಮನ ಸೆಳೆದನು. ಹುಟ್ಟಿನಿಂದಲೇ ನಡೆಯಲು ಸಾಧ್ಯವಾಗದ ಮುಹಮ್ಮದ್ ಯಾಹಿಯಾಗೆ ಹೊರಗೆ ನಡೆದಾಡುವುದು ತುಂಬಾ ಇಷ್ಟ. ಆದರೆ ದೈವಿಕ ಅಸಮರ್ಥನಾದ ಮುಹಮ್ಮದ್ ಗೆ ಸಾಧ್ಯವಾಗುತ್ತಿರಲಿಲ್ಲ. ಜನ್ಮಾಷ್ಟಮಿ ಶೋಭಾ ಯಾತ್ರೆಯಲ್ಲಿ ಬಾಲಕೃಷ್ಣನಾಗಿ ಭಾಗವಹಿಸಲು ಆಶಯ ವ್ಯಕ್ತಪಡಿಸಿದ. ಹಿರಿಯರ ನೆರವಿಂದ ಮಹಮ್ಮದ್ ಯಾಹಿಯಾ ಸಂತೋಷದಿಂದ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ. ಮಳೆಯ ನಡುವೆಯೂ ಮುಹಮ್ಮದ್ ನಗುಮುಖದೊಂದಿಗೆ ಶೋಭಾ ಯಾತ್ರೆಯಲ್ಲಿ ಮಿಂಚಿದ.
ತಾಯಿ ರುಬಿಯಾ ಮತ್ತು ಅಜ್ಜಿ ವೇಷಭೂಷಣ ಮಾಡುವಲ್ಲಿ ಸಹಕರಿಸಿರು. ಮುಹಮ್ಮದ್ ಯಾಹಿಯಾ ಕೋಝಿಕೋಡ್ ವೆಸ್ಟ್‍ಹಿಲ್ ಎಸ್.ಎಸ್. ಅಪಾರ್ಟ್‍ಮೆಂಟ್‍ನಲ್ಲಿ ನೆಲೆಸಿರುವ ತಲಶ್ಶೇರಿ ಮೂಲದ ಸನೇಜ್ ಮತ್ತು ರುಬಿಯಾ ದಂಪತಿಯ ಹಿರಿಯ ಪುತ್ರ. ಮಗನ ಚಿಕಿತ್ಸೆಗಾಗಿ ಅವರು ಕೋಝಿಕ್ಕೋಡಿನಲ್ಲಿ ಇದೀಗ ನೆಲಸಿದ್ದಾರೆ. ಕಳೆದ ಏಳು ವರ್ಷಗಳಿಂದ ವೆಸ್ಟ್‍ಹಿಲ್‍ನಲ್ಲಿ ವಾಸಿಸುತ್ತಿದ್ದಾರೆ. ಮುಹಮ್ಮದ್ ಯಾಹಿಯಾ ಬಿಲಾತಿಕುಳಂ ಬಿಇಎಂ ಯುಪಿ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ. ತಂದೆ ಸನೇಜ್ ಕೋಝಿಕ್ಕೋಡ್‍ನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಎರಡೂವರೆ ವರ್ಷದ ಯಹಾನ್ ರೆಹಮಾನ್ ನ ಸಹೋದರ.
ಕಳೆದ ವರ್ಷವೇ ಯಾಹಿಗೆ ಕೃಷ್ಣನ ವೇಷಧರಿಸುವ ಆಸೆ ಇತ್ತು. ಆದರೆ ಯಾಹಿಯಾ ಆರೋಗ್ಯದ ಕಾರಣದಿಂದ ಕಳೆದ ಜನ್ಮಾಷ್ಟಿಮಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಸಾಕಾರಗೊಂಡಿತು.
ನಟ ಹರೀಶ್ ಪೆರಾಡಿ ಅವರು ಮುಹಮ್ಮದ್ ಯಾಹಿಯಾ ನ ಚಿತ್ರವನ್ನು ಟಿಪ್ಪಣಿಯೊಂದಿಗೆ ಸಮೂಹ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಎರಡು ಧರ್ಮಗಳು ತಮ್ಮದೇ ಆದ ಆಚಾರ-ವಿಚಾರಗಳನ್ನು ಹೊಂದಿದ್ದು, ಸಮಾಜವಾದ ಮತ್ತು ಕಮ್ಯುನಿಸಂ ಹೇಳುವ ಹುಸಿ ಪ್ರಗತಿಪರರು ಬೇಕಾಗಿಲ್ಲ ಎಂದು ಗಟ್ಟಿಯಾಗಿ ಹೇಳುವ ಚಿತ್ರ ಇದಾಗಿದೆ ಎಂದು ಅವರು ಬರೆದಿದ್ದಾರೆ. ಕರ್ಮಫಲವನ್ನು ಜಗತ್ತಿಗೆ ಸಾರಿದ ಶ್ರೀಕೃಷ್ಣನ ಜನ್ಮದಿನದಂದು ಕರುಣಾಮಯಿ ಅಲ್ಲಾಹನ ಶುಭಾಶಯಗಳು ಎಂದು ಹರೀಶ್ ಪೆರಾಡಿ ಬರೆದಿರುವರು.