ನವದೆಹಲಿ: ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ಗಲಾಟೆಯ ಮಧ್ಯೆ, ದೇಶದ ಹಿತಾಸಕ್ತಿ ಮತ್ತು ಕಾಳಜಿಗಳನ್ನು ಪ್ರಮುಖವಾಗಿ ಇಡಬೇಕು ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ರಾಜಿಯಾಗದಂತೆ ಇರಬೇಕು ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.
ಜೂನ್‌ನಲ್ಲಿ ನಡೆದ ಪ್ರತ್ಯೇಕತಾವಾದಿ ನಾಯಕನ ಹತ್ಯೆಗೆ 'ಸಂಭಾವ್ಯ' ಭಾರತೀಯ ಸಂಬಂಧವನ್ನು ಉಲ್ಲೇಖಿಸಿ ಕೆನಡಾ ಭಾರತೀಯ ಅಧಿಕಾರಿಯೊಬ್ಬರನ್ನು ಆ ದೇಶವನ್ನು ತೊರೆಯುವಂತೆ ಕೇಳಿದ ಕೆಲವೇ ಗಂಟೆಗಳ ನಂತರ ಕೆನಡಾದ ರಾಜತಾಂತ್ರಿಕರನ್ನು ಹೊರಹಾಕುವುದಾಗಿ ಭಾರತ ಗುರುವಾರ ಘೋಷಿಸಿತು.
ಇದೀಗ ಈ ಬೆಳವಣಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಕೇಂದ್ರ ಸರ್ಕಾರದ ನಡೆಯನ್ನು ಸಮ್ಮತಿಸಿರುವ ಕಾಂಗ್ರೆಸ್ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ರಾಜಿಯಾಗದಂತೆ ಇರಬೇಕು ಎಂದು ಹೇಳಿದೆ. ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, 'ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಭಯೋತ್ಪಾದನೆ ಬೆದರಿಕೆಯೊಡ್ಡಿದಾಗ, ಭಯೋತ್ಪಾದನೆಯ ವಿರುದ್ಧ ನಮ್ಮ ದೇಶದ ಹೋರಾಟವು ರಾಜಿಯಾಗದಿರಬೇಕು. ನಮ್ಮ ದೇಶದ ಹಿತಾಸಕ್ತಿ ಮತ್ತು ಕಾಳಜಿಗಳನ್ನು ಎಲ್ಲಾ ಸಮಯದಲ್ಲೂ ಪ್ರಮುಖವಾಗಿ ಇಡಬೇಕು ಎಂದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತೀಯ ಸರ್ಕಾರಿ ಏಜೆಂಟರುಗಳು ಮತ್ತು ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕನ ಹತ್ಯೆಯ ನಡುವಿನ 'ಸಂಭಾವ್ಯ ಸಂಬಂಧ' ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಹೇಳಿಕೆಯನ್ನು ಭಾರತವು 'ಆಧಾರರಹಿತ' ಮತ್ತು 'ಪ್ರೇರಣೆ' ಎಂದು ಸಂಪೂರ್ಣವಾಗಿ ತಿರಸ್ಕರಿಸಿದೆ ಮತ್ತು ಕೆನಡಾದಿಂದ ಕಾರ್ಯನಿರ್ವಹಿಸುತ್ತಿರುವ ಭಾರತ ವಿರೋಧಿ ಅಂಶಗಳ ವಿರುದ್ಧ ತ್ವರಿತ ಕಾನೂನು ಕ್ರಮವನ್ನು ಕೋರಿದೆ.
ಕೆನಡಾದ ಸಂಸತ್ತಿನಲ್ಲಿ ಟ್ರುಡೊ ಹೇಳಿಕೆ ನೀಡಿದ ನಂತರ, ಅವರ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು ಉನ್ನತ ಭಾರತೀಯ ರಾಜತಾಂತ್ರಿಕರನ್ನು ಕೆನಡಾದಿಂದ ಹೊರಹಾಕಿದ್ದಾರೆ. ಕೆನಡಾದ ಬ್ರಾಡ್‌ಕಾಸ್ಟರ್ ಸಿಬಿಸಿ ನ್ಯೂಸ್ ಪ್ರಕಾರ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಮುಖ್ಯಸ್ಥ ಪವನ್ ಕುಮಾರ್ ರೈ ರಾಜತಾಂತ್ರಿಕರಾಗಿದ್ದಾರೆ ಎಂದು ಜೋಲಿಯ ಕಚೇರಿ ತಿಳಿಸಿದೆ. ಅತ್ತ ಕೆನಾಡ ಸರ್ಕಾರ ಭಾರತದ ರಾಯಭಾರಿಯನ್ನು ಉಚ್ಚಾಟಿಸಿದ ಬೆನ್ನಲ್ಲೇ ಭಾರತ ಸರ್ಕಾರ ಕೂಡ ಪ್ರತಿಕ್ರಮ ಕೈಗೊಂಡಿದ್ದು, ಭಾರತದಲ್ಲಿರುವ ಕೆನಡಾ ರಾಯಭಾರಿಯನ್ನೂ ಕೂಡ ಉಚ್ಛಾಟನೆ ಮಾಡಿದ್ದು, ಇನ್ನು ಐದು ದಿನದಲ್ಲಿ ಕೆನಡಾಗೆ ವಾಪಸಾಗುವಂತೆ ಆದೇಶಿಸಿದೆ.