ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತಾಚರಣೆ ಮಂಗಲೋತ್ಸವ ಸೆ. 29ರಂದು ಜರುಗಲಿದೆ. ಬೆಳಗ್ಗೆ 6.30ಕ್ಕೆ ಪ್ರಾತ:ಕಾಲ ಪೂಜೆ, 9ಕ್ಕೆ ಮೃತ್ತಿಕಾ ವಿಸರ್ಜನೆ, ಸಈಮೋಲ್ಲಂಘನೆ, 10ರಿಂದ 12ರ ವರೆಗೆ ಭಕ್ತಿಸಂಗೀತ ಕಾರ್ಯಕ್ರಮ ಜರುಗಲಿರುವುದು. ಮೇಧಾ ಮಂಜುನಾಥ್ ಅವರಿಂದ ಗಯನ, ವಿನೋದ್‍ಶ್ಯಾಮ್ ಆನೂರ್ ಮೃದಂಗ, ಲವಕುಮಾರ್ ಐಲ ತಬಲಾ, ತನ್ಮಯೀ ಉಪ್ಪಂಗಳ ವಯಲಿನ್‍ನಲ್ಲಿ ಸಹಕರಿಸುವರು.
ಮಧ್ಯಾಹ್ನ 2ಗಂಟೆಗೆ ಮಂತ್ರಾಕ್ಷತೆ, 3ಕ್ಕೆ ಸಮಾರೋಪ ಸಮಾರಂಭ ನಡೆಯುವುದು. ಒಡಿಯೂರು ಶ್ರೀ ಗುರುದೇವಾನಂದ ಸವಾಮೀಜಿ ಆಶೀರ್ವಚನ ನೀಡುವರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಹಿರಿಯ ವಕೀಲ ಐ.ವಿ ಭಟ್ ಅವರಭಿನಂದನಾ ಗ್ರಂಥ"ಸ್ಥಿತ ಪ್ರಜ್ಞ' ದ ಬಿಡುಗಡೆ ನಡೆಯುವುದು.
ಸಂಜೆ 4.30ರಿಂದ ಪುತ್ತೂರು ಜಗದೀಶ ಆಚಾರ್ಯ ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯುವುದು. 6.30ರಿಂದ ನಾಟ್ಯ ನಿಲಯಂ ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಶಿಷ್ಯವೃಂದದಿಂದ ಶಾಸ್ತ್ರೀಯ ಮತ್ತು ಜಾನಪದ ನೃತ್ಯ ಸಂಗಮ ಕಾರ್ಯಕ್ರಮ'ನೃತ್ಯ ಸಮರ್ಪಣಂ'ನಡೆಯುವುದು.