ನವದೆಹಲಿ: ಭಾರತದಲ್ಲಿ ಕ್ಷಯರೋಗ ಔಷಧಗಳ ಕೊರತೆ ಇಲ್ಲ. ಅವುಗಳ ದಾಸ್ತಾನು ಆರು ತಿಂಗಳಿಗಾಗುವಷ್ಟು ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ನವದೆಹಲಿ: ಭಾರತದಲ್ಲಿ ಕ್ಷಯರೋಗ ಔಷಧಗಳ ಕೊರತೆ ಇಲ್ಲ. ಅವುಗಳ ದಾಸ್ತಾನು ಆರು ತಿಂಗಳಿಗಾಗುವಷ್ಟು ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ದೇಶದಲ್ಲಿ ಕ್ಷಯರೋಗದ ಔಷಧಗಳ ಕೊರತೆ ಇದೆ ಎಂಬ ಮಾಧ್ಯಮಗಳ ವರದಿಯು ಆಧಾರರಹಿತವಾದುದು ಎಂದೂ ಹೇಳಿದೆ.
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ (ಎನ್‌ಟಿಇಪಿ) ಅಡಿಯಲ್ಲಿ ನೀಡುವ ಔಷಧಗಳ ಪರಿಣಾಮಕಾರಿತ್ವದ ಬಗ್ಗೆಯೂ ಮಾಧ್ಯಮಗಳು ಪ್ರಶ್ನಿಸಿದ್ದವು.
ಕೇಂದ್ರ ಸರ್ಕಾರದ ಮಟ್ಟದಲ್ಲೇ ಎನ್‌ಟಿಇಪಿ ಅಡಿಯಲ್ಲಿ ಕ್ಷಯರೋಗದ ಔಷಧಗಳನ್ನು ಸಂಗ್ರಹಿಸಿ, ಸಮಯೋಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಕೆಲವೊಮ್ಮೆ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ಸೀಮಿತ ಅವಧಿಗೆ ಸ್ಥಳೀಯವಾಗಿ ಕೆಲವು ಔಷಧಗಳನ್ನು ಸಂಗ್ರಹಿಸಲು ರಾಜ್ಯಗಳಿಗೆ ಸೂಚಿಸಲಾಗುತ್ತಿದೆ. ಇದು ರೋಗಿಗಳ ಆರೈಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.