ಮಂಜೇಶ್ವರ: ಕೇಂದ್ರ ಸಹಕಾರ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನೇಶನಲ್ ಪೆಡರೇಶನ್ ಓಫ್ ಟೂರಿಸಂ ಏಂಡ್ ಟ್ರಾನ್ಸ್‍ಪೋರ್ಟ್ ಕೋಪರೇಟಿವ್ಸ್ ಓಫ್ ಇಂಡಿಯ ಲಿಮಿಟೆಡ್ ಎಂಬ ಸಹಕಾರ ಸಂಸ್ಥೆ ಜ್ಯಾರಿಗೊಳಿಸುತ್ತಿರುವ ಜನೋಪಕಾರಪ್ರದವಾದ 20 ಯೋಜನೆಗಳಿಗೆ ಕೋರ್ಡಿನೇಟರ್‍ಗಳನ್ನು ಆಯ್ಕೆಮಾಡಲಾಗುವುದು.
ಆರೋಗ್ಯ, ವಿಧ್ಯಾಭ್ಯಾಸ, ಕೈಗಾರಿಕೆ, ಕೃಷಿ, ಟೂರಿಸಂ ಹಾಗೂ ಸಾರಿಗೆ ಎಂಬೀ ವಲಯಗಳಲ್ಲಿ ಈ ಯೋಜನೆ ಕಾರ್ಯನಿರ್ವಹಿಸಲಿದೆ. ಮಂಜೇಶ್ವರ, ವರ್ಕಾಡಿ, ಕುಂಬಳೆ ಪಂಚಾಯಿತಿಗಳಿಗೆ ಕೋರ್ಡಿನೇಟರ್‍ಗಳು, ಹಾಗೂ ವಾರ್ಡುಗಳಿಗೆ ಕೋರ್ಡಿನೇಟರ್‍ಗಳನ್ನು ಆಯ್ಕೆಮಾಡಬಹುದಾಗಿದೆ. ಸಮಾಜಸೇವೆಯೊಂದಿಗೆ ಉತ್ತಮ ಆದಾಯವನ್ನು ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ 9645604982 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.