ಕುಂಬಳೆ: ಕೇರಳದ ಹಿರಿಯ ಕನ್ನಡಪರ ಸಂಸ್ಥೆಯಾದ ಕೊಚ್ಚಿನ್ ಕನ್ನಡ ಸಂಘದ ವಾರ್ಷಿಕ ಮಹಾ ಸಭೆ ಡಿ ಶ್ರೀನಿವಾಸ ರಾವ್ ಇವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು. ಶ್ರೀಕಾಂತ್ ಆನವಟ್ಟಿ ವಾರ್ಷಿಕ ವರದಿ ಮಂಡಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಡಿ ಶ್ರೀನಿವಾಸ ರಾವ್(ಅಧ್ಯಕ್ಷ), ಡಾ. ಮಲ್ಲಿಕಾರ್ಜುನ ಎಸ್ ನಾಸಿ(ಉಪಾಧ್ಯಕ್ಷ), ಎಚ್.ಜೆ ವಜ್ರರಾಂಗ (ಹರೀಶ್)(ಪ್ರ.ಕಾರ್ಯದರ್ಶಿ), ಪರಿಣಿತ ರವಿ(ಜೊತೆ ಕಾರ್ಯದರ್ಶಿ), ವಿಷ್ಣು ತಂತ್ರಿ(ಕೋಶಾಧಿಕಾರಿ) ಇವರನ್ನು ಆಯ್ಕೆ ಮಾಡಲಾಯಿತು. ಎಚ್.ಜೆ. ವಜ್ರರಾಂಗ ಸ್ವಾಗತಿಸಿ, ಶ್ರೀಕಾಂತ ಆನವಟ್ಟಿ ವಂದಿಸಿದರು.