HEALTH TIPS

ನಿಪಾ ನಿಯಂತ್ರಣ ಕಾರ್ಯಸೂಚಿ: ಕ್ಷಿಪ್ರ ಪ್ರತಿಕ್ರಿಯೆ ತಂಡ ಭೇಟಿ: ಪರೀಕ್ಷೆಗಾಗಿ ಐಸಿಎಂಆರ್ ಮೊಬೈಲ್ ಲ್ಯಾಬ್

             ತಿರುವನಂತಪುರಂ: ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿಪಾ ವೈರಸ್ ದೃಢಪಟ್ಟಿದ್ದು, ಆರೋಗ್ಯ ಇಲಾಖೆ ನಿರ್ದೇಶನಾಲಯದಲ್ಲಿ ರಾಜ್ಯ ಮಟ್ಟದ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಲು ಆರಂಭಿಸಿದೆ ಎಂದು ಆರೋಗ್ಯ ಇಲಾಖೆ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

              ಕೋಝಿಕ್ಕೋಡ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಯಂತ್ರಣ ಕೊಠಡಿಯ ಜೊತೆಗೆ, ಇತರ ಜಿಲ್ಲೆಗಳಲ್ಲಿಯೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಮತ್ತು ಸಾರ್ವಜನಿಕರು  ಸಂಪರ್ಕಿಸಲು ಪೋನ್ ಸಂಖ್ಯೆಗಳನ್ನು ಸಹ ಲಭ್ಯಗೊಳಿಸಲಾಗಿದೆ. ಇದಲ್ಲದೇ ರಾಜ್ಯ ಮಟ್ಟದ ಸಮನ್ವಯಕ್ಕಾಗಿ ರಾಜ್ಯ ನಿಯಂತ್ರಣ ಕೊಠಡಿಯನ್ನು ಆರಂಭಿಸಲಾಗಿದೆ. ಬೆಳಗ್ಗೆ 10ರಿಂದ ಸಂಜೆ 6ರವರೆಗೆ 0471 2302160ಗೆ ಕರೆ ಮಾಡಬಹುದು. ಸಂದೇಹಗಳ ನಿವಾರಣೆಗಾಗಿ ಟೋಲ್ ಫ್ರೀ ಸಂಖ್ಯೆ 1056, 104 ಮತ್ತು 0471 2552056 24 ಗಂಟೆಗಳ ಕಾಲ ಸಂಪರ್ಕಿಸುತ್ತದೆ ಎಂದು ಸಚಿವರು ಹೇಳಿದರು.

              ಮುಂಜಾಗ್ರತಾ ಕ್ರಮಗಳ ಅಂಗವಾಗಿ ಸಚಿವರ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಸಭೆ ನಡೆಯಿತು. ಜಿಲ್ಲೆಗಳಿಗೆ ನಿಪಾ ಕಾಯಿಲೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ನೀಡಲಾಗಿದೆ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಸಭೆಯಲ್ಲಿ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರು, ಆರೋಗ್ಯ, ಪಶುಸಂಗೋಪನೆ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳು, ಔಷಧ ನಿಯಂತ್ರಕರು, ಆಹಾರ ಸುರಕ್ಷತಾ ಆಯುಕ್ತರು, ರಾಜ್ಯ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಮತ್ತು ಆಲಪ್ಪುಳ ರಾಷ್ಟ್ರೀಯ ವೈರಾಣು ಸಂಸ್ಥೆ ಉಪಸ್ಥಿತರಿದ್ದರು.

              ಅಗತ್ಯವಿರುವ ಸಂದರ್ಭದಲ್ಲಿ ಶಂಕಿತ ನಿಪಾ ವೈರಸ್ ಅನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಎಲ್ಲಾ ಜಿಲ್ಲೆಗಳಲ್ಲಿ ಇನ್ಫ್ಲುಯೆನ್ಸ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಪ್ರತ್ಯೇಕ ಆಂಬ್ಯುಲೆನ್ಸ್, ಐಸೋಲೇಶನ್ ವಾರ್ಡ್ ಮತ್ತು ವಿಶೇಷ ಚಿಕಿತ್ಸೆಯ ಸರದಿ ನಿರ್ಧಾರವನ್ನು ಸ್ಥಾಪಿಸಲು, ಪಿಪಿಇ ಕಿಟ್‍ಗಳು ಸೇರಿದಂತೆ ವಸ್ತುಗಳನ್ನು ಸುರಕ್ಷಿತಗೊಳಿಸಲು ಸೂಚನೆಗಳನ್ನು ಸಹ ನೀಡಲಾಗಿದೆ. ಕಣಿವ್ 108 ಆಂಬ್ಯುಲೆನ್ಸ್ ಸೇವೆಯನ್ನೂ ಖಾತ್ರಿಪಡಿಸಲಾಗಿದೆ. ಇದರೊಂದಿಗೆ, ಕಣ್ಗಾವಲು ಮತ್ತು ಪರೀಕ್ಷೆ, ಲಾಜಿಸ್ಟಿಕ್ಸ್, ತರಬೇತಿ, ಅರಿವು ಮತ್ತು ಮಾನಸಿಕ ಬೆಂಬಲಕ್ಕಾಗಿ ರಾಜ್ಯ ಮಟ್ಟದಲ್ಲಿ ಮತ್ತು ಎಲ್ಲಾ ಜಿಲ್ಲೆಗಳಲ್ಲಿ ವಿಶೇಷ ತಂಡಗಳನ್ನು ರಚಿಸಲಾಗುತ್ತದೆ.

                 ಶಂಕಿತ ಪ್ರಕರಣಗಳ ಆರಂಭಿಕ ಮಾದರಿ ಪರೀಕ್ಷೆಗಾಗಿ ಕೋಝಿಕ್ಕೋಡ್ ವೈರಲ್ ರಿಸರ್ಚ್ ಮತ್ತು ಡಯಾಗ್ನೋಸ್ಟಿಕ್ ಲ್ಯಾಬ್ ಜೊತೆಗೆ ಐ.ಸಿ.ಎಂ.ಆರ್ ನ ಮೊಬೈಲ್ ಲ್ಯಾಬ್ ಇಂದು ಮಧ್ಯಾಹ್ನ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.

              ಕೇರಳ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ನೇತೃತ್ವದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ನಿಪಾ ಕಾಯಿಲೆಗೆ ಸಂಬಂಧಿಸಿದಂತೆ ಜಿಲ್ಲಾ ಕಣ್ಗಾವಲು ಅಧಿಕಾರಿಗಳು, ವೈದ್ಯಕೀಯ ಅಧಿಕಾರಿಗಳು, ಆರೋಗ್ಯ ಮೇಲ್ವಿಚಾರಕರು, ಆರೋಗ್ಯ ನಿರೀಕ್ಷಕರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ನಸಿರ್ಂಗ್ ಸಹಾಯಕರಿಗೆ ತರಬೇತಿಯನ್ನು ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ಮತ್ತು ಆರೋಗ್ಯ ಕೇರಳದ ವೆಬ್‍ಸೈಟ್‍ಗಳು ಮತ್ತು ಫೇಸ್‍ಬುಕ್ ಪುಟಗಳಲ್ಲಿ ಇದಕ್ಕೆ ಸಂಬಂಧಿಸಿದ ಜಾಗೃತಿ ಸಾಮಗ್ರಿಗಳನ್ನು ಸಹ ಲಭ್ಯವಾಗುವಂತೆ ಮಾಡಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries