ಇಡುಕ್ಕಿ: ಇಡುಕ್ಕಿ ಅಣೆಕಟ್ಟಿನ ಮೇಲೇರಿ ಶಟರ್ ಬಾಗಿಲು ತೆರೆದ ಪ್ರಕರಣದ ಆರೋಪಿಯನ್ನು ಬಂಧಿಸಲು ಪೋಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಪಾಲಕ್ಕಾಡ್‍ನ ಒಟ್ಟಪಾಲಂ ಮೂಲದ ಆರೋಪಿ ವಿದೇಶಕ್ಕೆ ತೆರಳಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕ್ರಿಯೆ ಮುಗಿದ ಬಳಿಕ ಇಡುಕ್ಕಿ ಎಸ್ಪಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಿದ್ದಾರೆ. ಆರೋಪಿಯ ಕುಟುಂಬದ ಹಿನ್ನೆಲೆಯನ್ನು ಪೋಲೀಸರು ಒಟ್ಟಪಾಲಂನಿಂದ ಸಂಗ್ರಹಿಸಿದ್ದಾರೆ.
ಈ ಘಟನೆ ಸೆಪ್ಟೆಂಬರ್ 4ರಂದು ಕೆಎಸ್‍ಇಬಿ ಗಮನಕ್ಕೆ ಬಂದಿದೆ. ಆತನೊಂದಿಗೆ ಇಡುಕ್ಕಿ ಅಣೆಕಟ್ಟೆ ಬಳಿ ಬಂದ ಮೂವರನ್ನು ಪೆÇಲೀಸರು ವಿಚಾರಣೆ ಬಳಿಕ ಬಿಡುಗಡೆಗೊಳಿಸಿದರು. ಜುಲೈ 22 ರಂದು ಒಟ್ಟಪಾಲಂನ ಯುವಕ ಇಡುಕ್ಕಿ ಅಣೆಕಟ್ಟಿಗೆ ಹತ್ತಿ ಹೈಮಾಸ್ಟ್ ದೀಪದ ಕೆಳಗೆ ಆಗಮಿಸಿದ್ದ. ಹನ್ನೊಂದು ಸ್ಥಳಗಳ ಶಟರ್ ತೆರೆದು ಕಬ್ಬಿಣದ ರಾಡ್‍ಗೆ ದ್ರವವನ್ನು ಸುರಿದಿದ್ದ.