HEALTH TIPS

ಸೇನಾ ಬಾಂಧವ್ಯಕ್ಕೆ ಧಕ್ಕೆ ಇಲ್ಲ: ಕೆನಡಾ ಸೇನಾಪಡೆ ಉಪ ಮುಖ್ಯಸ್ಥ ಹೇಳಿಕೆ

                ವದೆಹಲಿ: ಭಾರತ ಮತ್ತು ಕೆನಡಾ ನಡುವಣ ಇತ್ತೀಚಿನ ರಾಜತಾಂತ್ರಿಕ ಬಿಕ್ಕಟ್ಟು ಉಭಯ ದೇಶಗಳ ಮಧ್ಯೆ ಯಾವುದೇ ಪರಿಣಾಮ ಬೀರುವುದಿಲ್ಲ, ಸೇನಾ ಬಾಂಧವ್ಯಕ್ಕೂ ಧಕ್ಕೆ ಉಂಟು ಮಾಡುವುದಿಲ್ಲ ಎಂದು ಕೆನಡಾ ಸೇನಾಪಡೆ ಉಪ ಮುಖ್ಯಸ್ಥ ಮೇಜರ್‌ ಜನರಲ್‌ ಪೀಟರ್‌ ಸ್ಕಾಟ್‌ ಮಂಗಳವಾರ ಇಲ್ಲಿ ಹೇಳಿದರು.

              ಇಂಡೊ- ಪೆಸಿಫಿಕ್‌ ಸೇನಾ ಮುಖ್ಯಸ್ಥರ ಸಮಾವೇಶದಲ್ಲಿ (ಇಪಿಎಸಿಸಿ) ಭಾಗವಹಿಸಿದ ಕೆನಡಾ ನಿಯೋಗದ ನೇತೃತ್ವವನ್ನು ಅವರು ವಹಿಸಿದ್ದಾರೆ. 30 ರಾಷ್ಟ್ರಗಳ ಸೇನಾ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಭಾರತೀಯ ಸೇನಾಪಡೆ ಈ ಸಮಾವೇಶ ಏರ್ಪಡಿಸಿದ್ದು ಎರಡು ದಿನಗಳು ನಡೆಯಲಿದೆ.

                'ನನಗೆ ತಿಳಿದಿರುವಂತೆ, ಬಿಕ್ಕಟ್ಟು ಈ ಸಮಯದಲ್ಲಿ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜಕೀಯ ಹಂತದಲ್ಲಿ ಈ ವಿಷಯ ಬಗೆಹರಿಯಬೇಕಿದೆ' ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.

                'ಸಮಾವೇಶದಲ್ಲಿ ಭಾಗವಹಿಸುವುದು ನಮಗೆ ಸಂತೋಷದ ವಿಷಯ. ಈ ಹಂತದಲ್ಲಿ ವಿವಾದವು ಯಾವ ವಿಷಯದ ಮೇಲೂ ಕರಾಳ ಛಾಯೆಯನ್ನು ಬೀರಿಲ್ಲ' ಎಂದು ಅವರು ಅಭಿಪ್ರಾಯಪಟ್ಟರು.

                'ಭಾರತದ ಸೇನಾಪಡೆ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರೊಂದಿಗೆ ನಾನು ಸೋಮವಾರ ರಾತ್ರಿ ಮಾತನಾಡಿದ್ದೇನೆ. ಇದು ರಾಜಕೀಯ ವಿಷಯ, ನಮ್ಮ ಬಾಂಧವ್ಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಇಬ್ಬರೂ ಒಪ್ಪಿಕೊಂಡಿದ್ದೇವೆ' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries