HEALTH TIPS

ಸುದ್ದಿ ವರದಿ ಮಾಡುವ ನೆಪದಲ್ಲಿ ಕಳವು: ಊರ್ ಮೂಪನ ಮನೆಯ ಚಿನ್ನ, ಮೊಬೈಲ್ ಕಳವು ದೂರು: ಬ್ಲಾಕ್ ಪಂಚಾಯತಿ ಸದಸ್ಯ ಸೇರಿದಂತೆ ತಂಡದ ಕೃತ್ಯವೆಂದು ಶಂಕೆ

           ತಿರುವನಂತಪುರ: ವನವಾಸಿಗಳ ಗ್ರಾಮ(ಊರ್) ನ  ಸುದ್ದಿ ವರದಿ ಮಾಡಲು ಎಂಬ ಹೆಸರಲ್ಲಿ ಆಗಮಿಸಿದ್ದ ತಂಡವೊಂದು ಚಿನ್ನಾಭರಣ ಹಾಗೂ ಮೊಬೈಲ್ ಕಳವು ಮಾಡಿರುವ ಬಗ್ಗೆ ದೂರಲಾಗಿದೆ. ತಿರುವನಂತಪುರಂ ಕೋಟೂರು ವನವಾಸಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

         ಪೋಲೀಸರು ಎಫ್ ಐಆರ್ ದಾಖಲಿಸಿ ಪ್ರಕರಣ ದಾಖಲಿಸಿದ್ದರೂ ಒತ್ತಡಕ್ಕೆ ಮಣಿದು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ತಿರುವಾಂಕೂರಿನ ರಾಜಮನೆತನಕ್ಕೆ ಪ್ರತಿ ವರ್ಷ ಜವಾಬ್ದಾರಿ ನಿರ್ವಹಿಸುವ  ಊರ್ ಮುಪ್ಪನ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಸುದ್ದಿ ವರದಿ ಮಾಡಲು ಬಂದ ಗುಂಪಿನೊಂದಿಗೆ ಸಿಪಿಎಂ ಬ್ಲಾಕ್ ಪಂಚಾಯತ್ ಸದಸ್ಯರೊಬ್ಬರು ಇದ್ದರು ಎಂದು ಊರ್ ನಿವಾಸಿಗಳು ಹೇಳಿದ್ದಾರೆ.

          ತಿರುವಾಂಕೂರು ರಾಜಮನೆತನಕ್ಕೆ ಅತ್ಯಂತ ಸಮೀಪವಿರುವ ವನವಾಸಿ ಊರ್ ನಲ್ಲಿ ಕಳ್ಳತನ ನಡೆದಿದೆ. 26ರಂದು ಕೊಟ್ಟೂರು ವನವಾಸಿ ಗ್ರಾಮಕ್ಕೆ ತಿರುವಾಂಕೂರು ರಾಜಮನೆತನದವರೊಂದಿಗಿನ ಸಂಬಂಧದ ಬಗ್ಗೆ ವರದಿ ಮಾಡಲು ಎಂಬ ಹೆಸರಲ್ಲಿ ಬಂದಿದ್ದ ಗುಂಪು ಊರ್ ಮೂಪ(ಯಜಮಾನ)ನ  ಮೊಮ್ಮಗನ ಮೊಬೈಲ್ ಪೋನ್ ಮತ್ತು ಒಂದೂವರೆ ಪವನ್ ಹಾರವನ್ನು ಕದ್ದೊಯ್ದಿದೆ ಎಂದು ದೂರಲಾಗಿದೆ. ಚಿನ್ನ, ಮೊಬೈಲ್ ಕದ್ದವರ ಹೆಸರನ್ನು ನಮೂದಿಸದೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳತನದ ಆರೋಪಿಗಳು ಹೈಪ್ರೊಪೈಲ್ ಆಗಿರುವ ಕಾರಣ ಪೋಲೀಸರು ರಾಜೀ ವ್ಯವಸ್ಥೆಗೆ ಕಾಲಾವಕಾಶ ನೀಡಿದ್ದಾರೆ ಎಂಬ ಆರೋಪವೂ ಇದೆ. ಪೋಲೀಸರ ಜೊತೆ ಶಾಮೀಲಾಗಿ ಎಫ್ ಐಆರ್ ದಾಖಲಿಸಿದಾಗ ದೂರಿನಲ್ಲಿ ನಮೂದಿಸಿರುವವರ ಹೆಸರನ್ನು ಕೈಬಿಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

            ಸುದ್ದಿ ತಂಡ ಊರ ಮೂಪನ ಮನೆಯಿಂದ ತೆರಳಿದ ಬಳಿಕ ಮಗುವಿನ ಅಳಲು ಕೇಳಿ ನೆಕ್ಲೇಸ್ ಕಳವಾಗಿರುವುದು ಗಮನಕ್ಕೆ ಬಂದಿದೆ. ಈ ಘಟನೆಯನ್ನು ಅರಣ್ಯ ಇಲಾಖೆ ಚೆಕ್‍ಪೋಸ್ಟ್‍ನಲ್ಲಿ ತಿಳಿಸಲು ಪೋನ್‍ಗಾಗಿ ಹುಡುಕುತ್ತಿರುವಾಗ ಪೋನ್ ಕೂಡ ಕಳ್ಳತನವಾಗಿರುವುದು ಅರಿವಿಗೆ ಬಂತು. ಇದರೊಂದಿಗೆ ನೆಯ್ಯಾರ್ ಡ್ಯಾಂ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಊರಿನ ನಿವಾಸಿಗಳ ಹೇಳಿಕೆಯಂತೆ ಸಿಪಿಎಂ ಬ್ಲಾಕ್ ಪಂಚಾಯತ್ ಸದಸ್ಯ ರಮೇಶನ್ ಎಂಬ ವ್ಯಕ್ತಿ ಸುದ್ದಿ ಪಡೆಯಲು ಬಂದ ಗುಂಪಿನಲ್ಲಿದ್ದರು. ಸುದ್ದಿ ಸಂಗ್ರಹಿಸಲೆಂದು ತಿಳಿಸಿದ್ದ ಗುಂಪು ಎಲ್ಲಿಯೂ ಸುದ್ದಿ ಪ್ರಕಟಿಸಿಲ್ಲ ಎನ್ನುತ್ತಾರೆ ಅರಣ್ಯವಾಸಿಗಳು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries