ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ, ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟಾರ್ ಸುಖ್ ಧೂಲ್ ಸಿಂಗ್ ಅಲಿಯಾನ್ ಸುಖಾ ದುನೆಕೆ ಹತ್ಯೆ ಮಾಡಿಸಿದ್ದು ನಾವು ಅದರ ಹೊಣೆಯನ್ನು ನಾವೇ ಹೊರುತ್ತೇನೆ ಎಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ಕೆನಾಡದಲ್ಲಿನ ಖಲಿಸ್ತಾನ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಉಗ್ರ ಸುಖಾ ದುನೆಕೆ ಭಾರತದ ಮೋಸ್ಟ್ ವಾಟೆಂಡ್ ಉಗ್ರರ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾನೆ. 2017ರಲ್ಲಿ ಭಾರತದಿಂದ ನಕಲಿ ಪಾಸ್‌ಪೋರ್ಟ್ ಮೂಲಕ ಕೆನಾಡಗೆ ಹಾರಿದ ಸುಖಾ ದುನೆಕೆ ಹಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದ.
ಖಲಿಸ್ತಾನ ಹೋರಾಟದ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದ ಗ್ಯಾಂಗ್‌ಸ್ಟರ್ ಅರ್ಶದೀಪ್ ದಲ್ಲಾ ಜೊತೆ ಗುರುತಿಸಿಕೊಂಡಿದ್ದ ಸುಖಾ ದುನೆಕೆ ಕಳೆದ ರಾತ್ರಿ ಎರಡು ಗುಂಪಿನ ನಡುವೆ ನಡೆದ ಗ್ಯಾಂಗ್‌ವಾರ್‌ನಲ್ಲಿ ಹತ್ಯೆಯಾಗಿದ್ದಾನೆ.ಸುಖಾ ಹತ್ಯೆ ಹೊಣೆ ಹೊತ್ತುಕೊಂಡಿರುವ ಲಾರೆನ್ಸ್ ಬಿಷ್ಣೋಯ್ ದೊಡ್ಡ ಸಂದೇಶ ಹರಿಬಿಟ್ಟಿದ್ದಾನೆ. ಉಗ್ರ ಸುಖಾ ದುನೆಕೆ ಒರ್ವ ಡ್ರಗ್ ವ್ಯಸನಿ ಹಾಗೂ ಡ್ರಗ್ ಪೆಡ್ಲರ್ ಆಗಿದ್ದ. ಗ್ಯಾಂಗ್‌ಸ್ಟರ್ ಗುರ್ಲಾಲ್ ಬ್ರಾರ್ ಹಾಗೂ ವಿಕ್ಕಿ ಮುದ್ದುಖೇರಾ ಹತ್ಯೆ ಮಾಡಿ ಕೆನಾಡಾಗೆ ಪರಾರಿಯಾಗಿದ್ದಾನೆ. ಆತ ಎಲ್ಲೇ ಹೋದರು ನಮ್ಮ ಹುಡುಗರು ಬಿಡುವುದಿಲ್ಲ. ಇದೀಗ ಸುಖಾ ದುನೆಕೆ ಕತೆ ಮುಗಿದಿದೆ ಎಂದು ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.
ಲಾರೆನ್ಸ್ ಬಿಷ್ಣೋಯ್ ಸದ್ಯ ಭಾರತದ ಎನ್‌ಐಎ ವಶದಲ್ಲಿದ್ದಾನೆ. ಅಹಮ್ಮದಾಬಾದ್ ಡ್ರಗ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಲಾರೆನ್ಸ್ ಬಿಷ್ಣೋಯ್, ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಹೀಗಾಗಿ ಎನ್‌ಐಎ ತನಿಖೆ ನಡೆಸುತ್ತಿದೆ. ಇದೀಗ ಸುಖಾ ದುನೆಕೆ ಹತ್ಯೆ ಹೊಣೆಯನ್ನು ಹೊತ್ತಿಕೊಂಡಿರುವ ಕಾರಣ ಭಾರತದ ತಲೆನೋವು ಹೆಚ್ಚಾಗಿದೆ.