ನವದೆಹಲಿ: ರದ್ದುಗೊಳಿಸಲಾದ ಅಥವಾ ರದ್ದುಗೊಳಿಸಬಹುದಾದ ಮದುವೆಯಿಂದ ಜನಿಸಿದ ಮಕ್ಕಳು, ಹಿಂದೂ ಉತ್ತರಾಧಿಕಾರ ಕಾಯ್ದೆ ಅನ್ವಯ ಪಾಲಕರ ಆಸ್ತಿಯಲ್ಲಿ ಹಕ್ಕು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ನವದೆಹಲಿ: ರದ್ದುಗೊಳಿಸಲಾದ ಅಥವಾ ರದ್ದುಗೊಳಿಸಬಹುದಾದ ಮದುವೆಯಿಂದ ಜನಿಸಿದ ಮಕ್ಕಳು, ಹಿಂದೂ ಉತ್ತರಾಧಿಕಾರ ಕಾಯ್ದೆ ಅನ್ವಯ ಪಾಲಕರ ಆಸ್ತಿಯಲ್ಲಿ ಹಕ್ಕು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ಕುರಿತು ತೀರ್ಪು ನೀಡಿದೆ.
ಮದುವೆಗೂ ಮುನ್ನ ಜೋಡಿಗೆ ಜನಿಸಿದ ಮಕ್ಕಳಿಗೆ ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಪಿತ್ರಾರ್ಜಿತ ಆಸ್ತಿ ಹಕ್ಕು ಇದೆಯೇ ಎಂಬುದಕ್ಕೆ ಸಂಬಂಧಿಸಿ 2011ರಲ್ಲಿ ದಾಖಲಾಗಿದ್ದ ಅರ್ಜಿಗೆ ಸಂಬಂಧಿಸಿ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ರದ್ದುಗೊಳಿಸಲಾದ ಅಥವಾ ರದ್ದುಗೊಳಿಸಬಹುದಾದ ಮದುವೆಯಿಂದ ಜನಿಸಿದ ಮಕ್ಕಳು, ತಮ್ಮ ಪಾಲಕರ ಸ್ವಯಾರ್ಜಿತ ಆಸ್ತಿಯಲ್ಲಿ ಮಾತ್ರ ಹಕ್ಕು ಹೊಂದಿದ್ದಾರೆಯೇ ಎಂಬ ಪ್ರಶ್ನೆಯನ್ನೂ ನ್ಯಾಯಪೀಠವು ಇತ್ಯರ್ಥಪಡಿಸಿದೆ. ಈ ಕುರಿತ ವಿವರವಾದ ಆದೇಶ ಲಭ್ಯವಾಗಬೇಕಿದೆ.
ಈ ಎಲ್ಲ ಪ್ರಶ್ನೆಗಳನ್ನು ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠವು 2011ರ ಮಾರ್ಚ್ 31ರಂದು ಆದೇಶಿಸಿತ್ತು.