ಕಾಸರಗೋಡು: ನಿರಂತರ ಚಟುವಟಿಕೆಗಳು ಕೇಂದ್ರಬಿಂದುವಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ, ಸಾಂಸ್ಕೃತಿಕ ಭವನದಲ್ಲಿ ಸೆಪ್ಟೆಂಬರ್ 28ರಂದು ಸಂಜೆ 4ಕ್ಕೆ ತೆಂಕುತಿಟ್ಟು 'ತೆಂಕುತಿಟ್ಟು ಯಕ್ಷಮಾರ್ಗ-1'ಕಾರ್ಯಕ್ರಮ ನಡೆಯಲಿದೆ.
ಇಂದು ಯುವ ಪೀಳಿಗೆಯು ಯಕ್ಷಗಾನದತ್ತ ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಈ ಸಂದರ್ಭ ಯಕ್ಷಗಾನ ನಾಟ್ಯದ ವಿಶೇಷತೆ, ಯಕ್ಷಗಾನದ ಘನತೆ, ಶಾಸ್ತ್ರೀಯತೆ ಎಂಬ ವಿಚಾರವಾಗಿ ನಾಟ್ಯದ ಸೂಕ್ಷ್ಮತೆ ಮೂಲಪಾಠದ ಜತೆಗೆ ಸಪ್ತ ತಾಳಗಳ ನಾಟ್ಯ ವೈಶಿಷ್ಟ್ಯ, ಇತ್ಯಾದಿಗಳ ಬಗ್ಗೆ ಶಾಸ್ತ್ರೀಯವಾದ ಪ್ರಾತ್ಯಕ್ಷಿಕೆ ನಡೆಯಲಿದೆ. ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರು ಹಾಗೂ ಯಕ್ಷಗಾನದ ಹಿರಿಯ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಪ್ರಾತ್ಯಕ್ಷಿಕೆ ನಡೆಸಿಕೊಡುವರು. ಯಕ್ಷಗಾನದ ನಾಟ್ಯ ಶಿಕ್ಷಕರು, ಹವ್ಯಾಸಿ ಕಲಾವಿದರು, ವೃತ್ತಿ ಕಲಾವಿದರು, ಯಕ್ಷಗಾನ ಅಬ್ಯಸಿಸುವ ವಿದ್ಯಾರ್ಥಿಗಳು, ಕಲಾಭಿಮಾನಿಗಳು ಪಾಲ್ಗೊಳ್ಳುವಂತೆ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ..