ಇಡುಕ್ಕಿ: ಚೆರುತೋಣಿ ಅಣೆಕಟ್ಟಿನಲ್ಲಿ ಭಾರೀ ಭದ್ರತಾ ಲೋಪವಾಗಿರುವುದು ಬೆಳಕಿಗೆ ಬಂದಿದೆ. ಯುವಕನೋರ್ವ ಅಣೆಕಟ್ಟನ್ನು ಹತ್ತಿ, ಅಲ್ಲಿಯ ಹೈಮಾಸ್ಟ್ ದೀಪದ ಮೂಲಕ ಕೆಳಗಿಳಿದು, ಅದನ್ನು ಲಾಕ್ ಮಾಡಿ ಶಟರ್ ಅನ್ನು ಮೇಲಕ್ಕೆತ್ತಿದ ಹಗ್ಗದ ಮೇಲೆ ದ್ರವ ವಸ್ತುವೊಂದನ್ನು ಸುರಿದಿರುವುದಾಗಿ ತಿಳಿದುಬಂದಿದೆ.
ಘಟನೆ ನಡೆದ ಎರಡು ವಾರಗಳ ನಂತರ ಘಟನೆ ಕೆಎಸ್‍ಇಬಿ ಗಮನಕ್ಕೆ ಬಂದಿದೆ.
ಜುಲೈ 22ರಂದು ನಡೆದ ಘಟನೆ ನಿನ್ನೆಯಷ್ಟೇ ಕೆಎಸ್‍ಇಬಿಗೆ ತಿಳಿಯಿತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಯುವಕ ಭುಜದ ಮೇಲೆ ಬ್ಯಾಗ್ ಹಾಕಿಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ. ಇದನ್ನು ಆಧರಿಸಿ ಕೆಎಸ್ ಇಬಿ ಪೋಲೀಸರಿಗೆ ದೂರು ನೀಡಿತ್ತು. ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಲಾಗಿದೆ.