ಕಾಸರಗೋಡು: ವಿದ್ಯಾನಗರದ ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಜರುಗಿತು. ಕನ್ನಡ ವಿಭಾಗದ 'ಸ್ನೇಹರಂಗ' ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಸಿನಿಮಾ ಸಂಗೀತ ನಿರ್ದೇಶಕ ವಿ. ಮನೋಹರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, "ಪ್ರತೀಯೊಂದು ವಿಚಾರದ ಬಗ್ಗೆ ಪ್ರಶ್ನಿಸುವುದನ್ನು ಕರಗತಮಾಡಿಕೊಳ್ಳಬೇಕು. ಇದು ನಮ್ಮನ್ನು ಬೆಳೆಸುತ್ತದೆ. ಪ್ರಶ್ನಿಸುವ ಸಂದರ್ಭಗಳಲ್ಲಿ ಸವಾಲುಗಳು ಎದುರಾಗುತ್ತವೆ. ಇದನ್ನು ಸಮರ್ಥವಗಿ ನಿಭಾಯಿಸುವ ಶಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು.
ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆಯಂತಹ ಸಿನಿಮಾ ಕಾಸರಗೋಡಿನ ಕನ್ನಡದ ಪರಿಸ್ಥಿತಿಯನ್ನು ತೆರೆದಿಟ್ಟಿದೆ. ಕನ್ನಡ ಮಕ್ಕಳಿಗೆ ಕನ್ನಡ ಅಧ್ಯಾಪಕರೇ ಶಿಕ್ಷಕರಾಗಬೇಕು. ಇದಕ್ಕಾಗಿ ಸಾತ್ವಿಕ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಈ ಸಂದರ್ಭ 'ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೆ, ಕೋಲು ಮಂಡೆ ಜಂಗಮ ದೇವ ಮುಂತಾದ ತಮ್ಮ ನಿರ್ದೇಶನದ ಚಿತ್ರಗೀತೆಗಳನ್ನು ವಿ.ಮನೋಹರ್ ಹಾಡಿ ವಿದ್ಯಾರ್ಥಿಗಳ ಮನರಂಜಿಸಿದರು. ನಂತರ ವಿದ್ಯಾರ್ಥಿಗಳು ಮನೋಹರ್ ಅವರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭ ವಿ. ಮನೋಹರ್ ಅವರನ್ನು ಗೌರವಿಸಲಾಯಿತು.
ಚಿತ್ರನಟ, ರಂಗಕರ್ಮಿ ಕಾಸರಗೋಡು ಚಿನ್ನಾ, ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮುಖ್ಯಸ್ಥೆ ಪ್ರೊ. ಸುಜಾತಾ ಎಸ್. ಡಾ. ಆಶಾಲತಾ, ಡ. ಬಾಲಕ್ರಷ್ಣ ಹೊಸಂಗಡಿ ಮೊದಲಾದವರು ಉಪಸ್ಥಿತರಿದ್ದರು.