ಕಾಸರಗೋಡು|: ಧಾರವಾಡದ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ವತಿಯಿಂದ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗಾಗಿ ಅಪ್ರಕಟಿತ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು 20,000 ರೂಪಾಯಿಗಳ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ.
ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಕನ್ನಡದ ಹಿರಿಯ-ಕಿರಿಯ ಲೇಖಕರು ಭಾಗವಹಿಸಬಹುದು. ಅಪ್ರಕಟಿತ ಕಥೆಗಳು, ನಿಯತಕಾಲಿಕಗಳು ಮತ್ತು ವಿಶೇಷಾಂಕಗಳಲ್ಲಿ ಪ್ರಕಟವಾಗಿದ್ದರೂ ಪುಸ್ತಕ ರೂಪದಲ್ಲಿ ಪ್ರಕಟವಾಗದಿರುವ ಕಥೆಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಸ್ಪರ್ಧಿಗಳು ಕಡ್ಡಾಯವಾಗಿ 12 ಫೋಂಟ್‍ನಲ್ಲಿ 1/4 ಅಳತೆಯ ಕಾಗದದಲ್ಲಿ, 80-120 ಪುಟಗಳಿಗೆ ಮೀರದಂತೆ ಟೈಪು ಮಾಡಿ, ಬೈಂಡು ಮಾಡಿದ ಕಥೆಗಳ ಮೂರು ಪ್ರತಿಗಳನ್ನು ನವೆಂಬರ್ 12ರ ಮೊದಲು ವಿಕಾಸ ಹೊಸಮನಿ (ಸಂಚಾಲಕರು), ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ, 2ನೆಯ ಕ್ರಾಸ್, 2ನೆಯ ಮೇನ್, ದಾನೇಶ್ವರಿ ನಗರ, ಹಾವೇರಿ - 581110(ಮೊಬೈಲ್/ವಾಟ್ಸಾಪ್ 9110687473)ವಿಳಾಸಕ್ಕೆ ಕಳುಹಿಸಬೇಕು. ಹಸ್ತಪ್ರತಿಗಳನ್ನು ಯಾವ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಾಹಿತ್ಯ ವೇದಿಕೆಯ ಸಂಚಾಲಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.