ತಿರುವನಂತಪುರಂ: ಕನ್ನಮ್ಮುಳ ಅಮೈಝಂಚನ್ ನದಿಯಲ್ಲಿ ವೈದ್ಯರ ಮೃತದೇಹ ಪತ್ತೆಯಾಗಿದೆ. ತಿರುವನಂತಪುರಂ ಜನರಲ್ ಆಸ್ಪತ್ರೆಯ ಡಾಕ್ಟರ್ ಬಿಪ್ ಅವರ ಮೃತದೇಹವನ್ನು ಕಣ್ಣಮ್ಮುಳ ಸೇತುವೆ ಬಳಿಯ ಹೊಳೆಯಿಂದ ಹೊರತೆಗೆಯಲಾಗಿದ್ದು, ಮೃತದೇಹದಲ್ಲಿ ಪ್ಯಾಂಟ್ ಮತ್ತು ಟೀ ಶರ್ಟ್ ಮಾತ್ರವಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ಅವರು ಅರಿವಳಿಕೆ ವಿಭಾಗದ ಮುಖ್ಯಸ್ಥರಾಗಿದ್ದರು. ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ವೈದ್ಯರು ಈ ಪ್ರದೇಶಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.
ಅವರ ಕಾರು ಆಸುಪಾಸಲ್ಲಿ ಪತ್ತೆಯಾಗಿದೆ. ಇದರಿಂದ ಔಷಧ ಬಾಟಲಿಗಳು ಮತ್ತು ಸಿರಿಂಜ್ ವಶಪಡಿಸಿಕೊಳ್ಳಲಾಗಿದೆ. ಪೋಲೀಸರು ಹೆಚ್ಚಿನ ವೈಜ್ಞಾನಿಕ ತನಿಖೆ ನಡೆಸುತ್ತಿದ್ದಾರೆ.
ಸ್ಥಳೀಯರ ಗಮನಕ್ಕೆ ಮೊದಲು ಶವ ಕಂಡುಬಂತು. ನಂತರ ಪೋಲೀಸರಿಗೆ ಮಾಹಿತಿ ನೀಡಿದ್ದು, ಪೋಲೀಸರು ಸಂಬಂಧಿಕರಿಗೆ ಕರೆ ಮಾಡಿ ಶವ ಗುರುತಿಸಿದ್ದಾರೆ. ಆತ್ಮಹತ್ಯೆ ಎಂಬುದು ಪ್ರಾಥಮಿಕ ತೀರ್ಮಾನ. ಡಾ.ಬಿಪ್ ಅವರಿಗೆ ಖಿನ್ನತೆಯ ಸಮಸ್ಯೆ ಇತ್ತು ಎಂದು ಸೂಚಿಸಲಾಗಿದೆ. ಡಾ.ಬಿಪ್ ಪತ್ನಿ ಕೂಡ ವೈದ್ಯೆ.