ಪೆರ್ಲ: ಜಿ.ಕೆ.ಫ್ರೆಂಡ್ಸ್ ಕೆ.ಕೆ.ಕಾಡು ಶೇಣಿ ಇದರ ವತಿಯಿಂದ ದ್ವಿತೀಯ ವರ್ಷದ ಓಣಂ ಆಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು.
ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯೆ ಕುಸುಮಾವತಿ ಟೀಚರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ಮಹೇಶ್ ಭಟ್, ಬೆದ್ರಂಪಳ್ಳ ಎಎಲ್ ಪಿ ಶಾಲಾ ಮುಖ್ಯೋಪಾಧ್ಯಾಯ ಮಹೇಶ್ ಮಾಸ್ತರ್, ಕೇರಳ ಎಕೋನೋಮಿಕ್ಸ್ ಆಂಡ್ ಸ್ಟಾಟಿಕ್ಸ್ ಇಲಾಖೆಯ ರಿಸರ್ಚ್ ಆಫೀಸರ್ ವೆಂಕಪ್ಪ ನಾಯ್ಕ ಮಧೂರು, ಶೇಣಿ ಶಾಲಾ ಶಿಕ್ಷಕ ಶರತ್ಚಂದ್ರ ಶೆಟ್ಟಿ ಶೇಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಕು. ಅಭಿಜ್ಞಾ ವಿ.ಎಸ್. ಪ್ರಾರ್ಥನೆಗೈದರು. ಯೋಗಿತಾ ಶೇಣಿ ಸ್ವಾಗತಿಸಿ, ತುಳಸಿ ಶೇಣಿ ವಂದಿಸಿದರು. ಕ್ಲಬ್ಬಿನ ಅಧ್ಯಕ್ಷ ವಸಂತ ನಾಯ್ಕ್ ಶೇಣಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಮಕ್ಕಳಿಗೆ ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.