ನವದೆಹಲಿ :ಮಾತನಾಡಲು ತೊಂದರೆ ಎದುರಿಸುತ್ತಿದ್ದ ಅವಿವಾಹಿತ ಬುಡಕಟ್ಟು ಯುವಕರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ ಕುರಿತು ಕ್ರಮ ತೆಗೆದುಕೊಂಡ ವರದಿ (ಎಟಿಆರ್) ಸಲ್ಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಒಡಿಶಾ ಸರಕಾರಕ್ಕೆ ನಿರ್ದೇಶಿಸಿದೆ. ಈ ಪ್ರದೇಶದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಯ ಸಂಖ್ಯೆಯ ಹೆಚ್ಚಳವನ್ನು ಎತ್ತಿ ತೋರಿಸುವ ಸಲುವಾಗಿ ಒಡಿಶಾ ಮಾಲ್ಕಂಗಿರಿ ಜಿಲ್ಲೆಯ ಮಾಥಿಲಿ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಅವಿವಾಹಿತ ಯುವಕರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಆರೋಪಿಸಿ ಮಾನವ ಹಕ್ಕುಗಳ ನ್ಯಾಯವಾದಿ ರಾಧಾಕಾಂತ್ ತ್ರಿಪಾಠಿ ಅವರು ಎನ್‌ಎಚ್‌ಆರ್ಸಿಗೆ ದೂರು ಸಲ್ಲಿಸಿದ್ದರು.
'ಅಕ್ರಿಡೆಟೆಡ್ ಸೋಷಿಯಲ್ ಹೆಲ್ತ್ ಆಯಕ್ಟಿವಿಸ್ಟ್' ಕಾರ್ಯಕರ್ತರ ವರದಿಯ ಆಧಾರದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಯುವಕರ ಅನುಮತಿ ಪಡೆದುಕೊಂಡಿಲ್ಲ ಎಂದು ತ್ರಿಪಾಠಿ ಆರೋಪಿಸಿದ್ದಾರೆ. ಎನ್‌ಎಚ್‌ಆರ್ಸಿ ಮಧ್ಯೆ ಪ್ರವೇಶಿಸುವಂತೆ ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ತ್ರಿಪಾಠಿ ಆಗ್ರಹಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಎನ್‌ಎಚ್‌ಆರ್ಸಿ ನಾಲ್ಕು ವಾರಗಳ ಒಳಗೆ ಕ್ರಮ ತೆಗೆದುಕೊಂಡ ವರದಿ (ಎಟಿಆರ್) ಸಲ್ಲಿಸುವಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಲ್ಕಂಗಿರಿ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.
ನರೇಶ್ ಗೋಯಲ್ ಅವರನ್ನು ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಅವರನ್ನು ಸೆಪ್ಟಂಬರ್ 11ರ ವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿತು.