ಮಂಜೇಶ್ವರ: ದೇಶೀಯ ಅಧ್ಯಾಪಕ ಪರಿಷತ್(ಎನ್.ಟಿ.ಯು) ಮಂಜೇಶ್ವರ ಉಪಜಿಲ್ಲಾ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕ ದಂಪತಿಗಳಾದ ಶಂಕರ ಭಟ್ ಉಳುವಾನ- ಕಮಲಾ ಟೀಚರ್ ಅವರನ್ನು ಸ್ವಗೃಹದಲ್ಲಿ ಗೌರವಿಸಲಾಯಿತು. ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಕೆ ಆರ್ ಸ್ವಾಗತಿಸಿದರು.
ರಾಜ್ಯ ಉಪಾಧ್ಯಕ್ಷ ವೆಂಕಪ್ಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಧರ ಭಟ್ ಸನ್ಮಾನಿತರ ಗುಣಗಾನ ಮಾಡಿದರು. ಸನ್ಮಾನಿತ ದಂಪತಿಗಳು ಸಂಘಟನೆಗೆ ಶುಭಹಾರೈಸಿ ಮಾರ್ಗದರ್ಶನ ನೀಡಿದರು. ಸಮಿತಿ ಹಿರಿಯ ಸದಸ್ಯ ಜಯರಾಮ ಸಿಚ್, ಕೃಷ್ಣಮೂರ್ತಿ ಎನ್, ಜಯಂತಿ ಟೀಚರ್ ಉಪಸ್ಥಿತರಿದ್ದರು. ಉಪಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ವಂದಿಸಿದರು.