ನವದೆಹಲಿ: ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ಕೋರಿದ ಪ್ರಕರಣಗಳಲ್ಲಿ ಕ್ರೌರ್ಯದ ವಿಚಾರವಾಗಿ ವಸ್ತುನಿಷ್ಠವಾಗಿ ಆಲೋಚಿಸುವುದಕ್ಕಿಂತಲೂ ಅದನ್ನು ಅನುಭವಿಸುವ ವ್ಯಕ್ತಿಯ ದೃಷ್ಟಿಯಿಂದ ಅವಲೋಕಿಸುವುದು ಮುಖ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನವದೆಹಲಿ: ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ಕೋರಿದ ಪ್ರಕರಣಗಳಲ್ಲಿ ಕ್ರೌರ್ಯದ ವಿಚಾರವಾಗಿ ವಸ್ತುನಿಷ್ಠವಾಗಿ ಆಲೋಚಿಸುವುದಕ್ಕಿಂತಲೂ ಅದನ್ನು ಅನುಭವಿಸುವ ವ್ಯಕ್ತಿಯ ದೃಷ್ಟಿಯಿಂದ ಅವಲೋಕಿಸುವುದು ಮುಖ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಂ.ಎಂ.ಸುಂದರೇಶ್ ಅವರಿದ್ದ ನ್ಯಾಯಪೀಠ, ವಿಚ್ಛೇದನ ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿತು.
'ಪ್ರಕರಣವೊಂದರಲ್ಲಿ, ಒಬ್ಬ ಮಹಿಳೆ ಪಾಲಿಗೆ ಕ್ರೌರ್ಯ ಎನಿಸುವುದು ಪುರುಷನಿಗೆ ಕ್ರೌರ್ಯವಾಗಲಿಕ್ಕಿಲ್ಲ. ಅದರಲ್ಲೂ ವಿಚ್ಛೇದನ ಕೋರಿ ಪತ್ನಿ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ ಸಮಗ್ರ ಅವಲೋಕನ ಅಗತ್ಯ' ಎಂದು ನ್ಯಾಯಪೀಠ ಹೇಳಿದೆ.
ಕಕ್ಷಿಗಾರರು 15 ವರ್ಷಗಳ ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಪರಸ್ಪರರತ್ತ ಗಂಭೀರ ಆರೋಪಗಳನ್ನೂ ಅವರು ಮಾಡಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ದಂಪತಿಗೆ ವಿಚ್ಛೇದನ ನೀಡಿದೆ.