ನವದೆಹಲಿ: ಸಾಹಿತಿ ವಿವೇಕ ಶಾನಭಾಗ ಅವರ 'ಸಕೀನಾಳ ಮುತ್ತು' ಕಾದಂಬರಿಯು ಇಂಗ್ಲಿಷ್‌ಗೆ ಅನುವಾದಗೊಂಡಿದ್ದು, ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. 'ಪೆಂಗ್ವಿನ್ ರ್‍ಯಾಂಡಮ್ ಹೌಸ್ ಇಂಡಿಯಾ (ಪಿಆರ್‌ಎಚ್‌ಐ)' ಈ ಕೃತಿಯನ್ನು ಪ್ರಕಟಿಸಿದೆ.
ನವದೆಹಲಿ: ಸಾಹಿತಿ ವಿವೇಕ ಶಾನಭಾಗ ಅವರ 'ಸಕೀನಾಳ ಮುತ್ತು' ಕಾದಂಬರಿಯು ಇಂಗ್ಲಿಷ್‌ಗೆ ಅನುವಾದಗೊಂಡಿದ್ದು, ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. 'ಪೆಂಗ್ವಿನ್ ರ್‍ಯಾಂಡಮ್ ಹೌಸ್ ಇಂಡಿಯಾ (ಪಿಆರ್‌ಎಚ್‌ಐ)' ಈ ಕೃತಿಯನ್ನು ಪ್ರಕಟಿಸಿದೆ.
'ಸಕೀನಾಸ್ ಕಿಸ್' ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿರುವ ಕಾದಂಬರಿಯನ್ನು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಶ್ರೀನಾಥ್ ಪೆರೂರು ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ.
'ಜಗತ್ತು ವಿಸ್ಮಯಕಾರಿಯಾಗಿ ಕೆಲಸ ಮಾಡುತ್ತದೆ. ನನ್ನ ಬರವಣಿಗೆ ಇದನ್ನು ನನಗೆ ದೃಢಪಡಿಸಿದೆ. ಕಾದಂಬರಿಯ ಅನುವಾದ ಮಾಡಿರುವ ಶ್ರೀನಾಥ್ ಪೆರೂರು ಅವರ ಉದಾರತೆಗೆ ನಾನು ಕೃತಜ್ಞನಾಗಿದ್ದೇನೆ' ಎಂದು ಶಾನಭಾಗ ಹೇಳಿದ್ದಾರೆ.
ಸತ್ಯ ಮತ್ತು ಗ್ರಹಿಕೆಯ ನಡುವಿನ ಅಂತರವನ್ನು ಪ್ರಶ್ನಿಸುವ, ಸಾಹಿತ್ಯಕ ಮೇರುಕೃತಿ ಎಂಬ ಮನ್ನಣೆಗೆ ಪಾತ್ರವಾಗಿರುವ ಈ ಕಾದಂಬರಿಯು 2021ರಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದು ಓದುಗರನ್ನು ವ್ಯಾಪಕವಾಗಿ ಆಕರ್ಷಿಸಿದೆ.