ಕೋಝಿಕ್ಕೋಡ್: ಮುಸ್ಲಿಂ ವೈಯಕ್ತಿಕ ಕಾನೂನನ್ನು ಟೀಕಿಸುತ್ತಿರುವ ಇಸ್ಲಾಮಿಕ್ ವಿದ್ವಾಂಸ ಸಿ.ಎಚ್.ಮುಸ್ತಫಾ ಮೌಲವಿಗೆ ಕೊಲೆ ಬೆದರಿಕೆ ಬಂದಿದೆ.
ಇಸ್ಲಾಂ ಧರ್ಮದ ಲಿಂಗ ತಾರತಮ್ಯದ ವಿರುದ್ಧ ನಿರಂತರವಾಗಿ ಹೋರಾಡುವ ಮುಸ್ತಫಾ ಮೌಲವಿಯವರು ತಮ್ಮ ಧರ್ಮದಿಂದಲೇ ಬೆದರಿಕೆ, ಬೈಗುಳದ ಮಾತು, ಹೊಡೆತಗಳನ್ನು ಎದುರಿಸಬೇಕಾಗಿ ಬಂದಿದೆ.
ಇಲ್ಲಿಯವರೆಗೂ ಫೇಸ್ ಬುಕ್ ನಲ್ಲಿ ಮಾತ್ರ ನಿಂದನೆ ಮಾಡುತ್ತಿದ್ದರು.ಆದರೆ ಈಗ ವೈಯಕ್ತಿಕವಾಗಿ ಬೆದರಿಕೆ ಹಾಕುತ್ತಿದ್ದಾರೆ. ಪೋಲೀಸರು ದೂರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಹಿತಕರ ಘಟನೆಗಳು ನಡೆದರೆ ಎಲ್ಲರೂ ಸಂತಾಪ ಸೂಚಿಸುತ್ತಾರೆ. ಸಾವಿಗೆ ಹೆದರುವುದಿಲ್ಲ. ಆದರೆ ಒಬ್ಬ ವ್ಯಕ್ತಿಯ ಸ್ವಾತಂತ್ರ್ಯವನ್ನು ಪೋಲೀಸರು ರಕ್ಷಿಸಬೇಕಲ್ಲವೇ ಎಂದು ಸಿ.ಎಚ್.ಮುಸ್ತಫಾ ಮೌಲವಿ ಹೇಳಿರುವರು.
ಮುಸ್ತಫಾ ಅವರು ಸೆಂಟರ್ ಫಾರ್ ಇನ್‍ಕ್ಲೂಸಿವ್ ಇಸ್ಲಾಂ ಮತ್ತು ಹ್ಯೂಮಾನಿಸಂನ ಸಲಹೆಗಾರರಾಗಿದ್ದಾರೆ. ಸೆಪ್ಟೆಂಬರ್ 19, ಮಂಗಳವಾರ ಅವರು ಕೋಝಿಕ್ಕೋಡ್‍ನಿಂದ ಕೊಟ್ಟಾಯಂಗೆ ಗರೀಬ್ ರಥದಲ್ಲಿ ಪ್ರಯಾಣಿಸುತ್ತಿದ್ದಾಗ ಅವರಿಗೆ ಮೊದಲ ಬೆದರಿಕೆ ಬಂದಿದೆ.
"ರೈಲು ಹತ್ತುವ ಮೊದಲು ಒಬ್ಬ ವ್ಯಕ್ತಿ ನನ್ನ ಬಳಿಗೆ ಬಂದು ನಾನು ಮುಸ್ತಫಾ ಮೌಲವಿಯೇ ಎಂದು ಕೇಳಿದನು. ನಾನು ಹೌದು ಎಂದು ಹೇಳಿದಾಗ ಅವನು ನನ್ನ ಕಂಪಾರ್ಟ್‍ಮೆಂಟ್ ಸಂಖ್ಯೆಯನ್ನು ಕೇಳಿದನು. ರೈಲು ಸಂಜೆ 5.45 ರ ಸುಮಾರಿಗೆ ಎರ್ನಾಕುಳಂ ಪಟ್ಟಣಕ್ಕೆ ಬಂದಾಗ, ನನ್ನ ಕಂಪಾರ್ಟ್‍ಮೆಂಟ್‍ನಲ್ಲಿದ್ದ ಪ್ರಯಾಣಿಕರು ಇಳಿದರು. ನಂತರ ಅವರು ಬಂದು ನನ್ನ ಮುಂದೆ ಕುಳಿತು ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಕೇಳಿದರು. "ಶ್ರೀನಾರಾಯಣ ಗುರು ಸಮಾಧಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೊಟ್ಟಾಯಂಗೆ ಹೋಗುವುದಾಗಿ ಹೇಳಿದಾಗ ಅವರು "ನೀವು ಶ್ರೀ ನಾರಾಯಣ ಗುರುಗಳ ಅನುಯಾಯಿಯಾಗಿದ್ದರೆ ನೀವು ಮೌಲವಿಯಾಗಿರುವೆ? ನಿಮ್ಮನ್ನು ಮೌಲವಿ ಎಂದು ಪರಿಗಣಿಸಬಹುದೇ? ಮುಸ್ತಫಾ ಸ್ವಾಮಿ ಎಂದು ಹೇಳಬಹುದೇ?" “ರಾಮನನ್ನು ಪ್ರಾರ್ಥಿಸುವವರು ಸ್ವರ್ಗಕ್ಕೆ ಹೋಗುತ್ತಾರೆಯೇ ಎಂದು ಅವರು ನನ್ನನ್ನು ಕೇಳಿದರು.
ಜೊತೆಗೆ ನಾನು ಇಸ್ಲಾಂ ಧರ್ಮವನ್ನು ನಾಶ ಮಾಡಲು ಯತ್ನಿಸಿದೆ ಎಂದು ಗಲಾಟೆ ಸೃಷ್ಟಿಸಿದರು. ನಾನು ಭೂಮಿಯ ಮೇಲಿರÀಬಾರದು. ಚೇಕನ್ನೂರಿಗೆ ಏನಾಯ್ತು ಗೊತ್ತಾ ಅಂತಲೂ ಕೇಳಿದರು ಎಂದು ಮುಸ್ತಫಾ ಮೌಲವಿ ತಿಳಿಸಿರುವರು.
ಈ ಸಂಬಂಧ ಮುಸ್ತಫಾ ಅವರು ಅಮೀನ್ ಅಬು ಬಕರ್ ಅಲಿಯಾಸ್ ಅಮೀನ್ ಮಾಹಿ ವಿರುದ್ಧ ಕೋಝಿಕ್ಕೋಡ್ ಸೈಬರ್ ಪೋಲೀಸರಿಗೆ ದೂರು ನೀಡಿದ್ದರು, ಆದರೆ ಪೋಲೀಸರು ಹೇಳಿಕೆಯನ್ನು ದಾಖಲಿಸಲು ಅಥವಾ ಎಫ್‍ಐಆರ್ ದಾಖಲಿಸಲು ಸಿದ್ಧವಾಗಿಲ್ಲ ಎಂದು ಹೇಳಿರುವರು.