ಕಾಸರಗೋಡು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಸರಗೋಡು ಶಾಖೆಯಿಂದ ತಿರುವನಂತಪುರ ಶಾಖೆಗೆ ಕಳುಹಿಸಿಕೊಡಲಾದ ನೋಟಿನ ಕಂತೆಗಳಲ್ಲಿ ಕಳ್ಳನೋಟು ಪತ್ತೆಯಾಗಿರುವ ಪ್ರಕರಣವನ್ನು ಕ್ರೈಂ ಬ್ರಾಂಚ್‍ಗೆ ಹಸ್ತಾಂತರಿಸಲು ಚಿಂತನೆ ನಡೆಸಲಾಗಿದೆ. ಕಳ್ಳನೋಟು ಪತ್ತೆಯಗಿರುವ ಬಗ್ಗೆ ತಿರುವನಂತಪುರ ಮ್ಯೂಸಿಯಂ ಠಾಣೆ ಪೊಲೀಸರು ತನಿಖೆಯನ್ನು ಕಾಸರಗೋಡಿಗೆ ವಿಸ್ತರಿಸಲಾಗಿದೆ.
ಈ ಮಧ್ಯೆ ಮಲೆನಾಡು ಪ್ರದೇಶದಲ್ಲೂ ಕಳ್ಳನೋಟು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸುವ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಮಲೆನಾಡು ಕುಂಡಂಗುಳಿಯ ಖಾಸಗಿ ಹಣಕಾಸು ಸಂಸ್ಥೆಯೊಂದರ ಕಲೆಕ್ಷನ್ ಏಜೆಂಟರಿಗೆ 500ರೂ. ಮೌಲ್ಯದ ನಾಲ್ಕು ನೋಟುಗಳು ಲಭಿಸಿತ್ತು. ಎಸ್‍ಬಿಐ ಕಾಸರಗೋಡು ಶಾಖೆಯಿಂದ ನೋಟುಗಳ ಕಂತೆಯನ್ನು ಅತೀ ಭದ್ರತೆಯೊಂದಿಗೆ ಮೂರು ದಿವಸಗಳ ಹಿಂದೆ ತಿರುವನಂತಪುರಕ್ಕೆ ಕಳುಹಿಸಿಕೊಡಲಾಗಿದ್ದು, ಇದನ್ನು ಪರಿಶೋಧಿಸಿದಾಗ 500ರೂ. ಮುಖಬೆಲೆಯ ಐದು ಕಳ್ಳನೋಟುಗಳು ಪತ್ತೆಯಾಗಿತ್ತು. ಕಳ್ಳನೋಟು ವಿತರಣೆಯಲ್ಲಿ ಅಂತಾರಾಜ್ಯ ದಮಧೆಕೋರರ ಕೈವಾಡದ ಶಂಕೆ ವ್ಯಕ್ತಪಡಿಸಲಾಗಿದೆ.