ಪೆರ್ಲ : ಆಕಸ್ಮಿಕವಾಗಿ ಅಗಲಿದ ಕಾಂಗ್ರೆಸ್ ಕಾರ್ಯಕರ್ತ ಪೂವಪ್ಪ ಪಾಯಿತ್ತಡ್ಕ ಅವರಿಗೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಭೆ ಎಣ್ಮಕಜೆ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ತನ್ನ ಬಾಲ್ಯ ಕಾಲದಿಂದಲೇ ಕಾಂಗ್ರೆಸ್ ಚಟುವಟಿಕೆಯೆಡೆಗೆ ಆಕರ್ಷಿತರಾಗಿ ಸಕ್ರಿಯ ಕಾರ್ಯಕರ್ತರಾಗಿದ್ದ ಪೂವಪ್ಪ ಅವರು ಪಕ್ಷದ ನಿಷ್ಠಾವಂತರಾಗಿ ದುಡಿಯುತ್ತಿದ್ದರು. ಅವರ ಅಗಲುವಿಕೆ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಸಂತಾಪ ವ್ಯಕ್ತಪಡಿಸಿದರು.
ಎಣ್ಮಕಜೆ ಮಂಡಲ ಅಧ್ಯಕ್ಷ ಬಿ.ಎಸ್.ಗಾಂಭೀರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರವೀಂದ್ರನಾಥ ನಾಯಕ್ ಶೇಣಿ, ವಿಲ್ಫ್ರೆಡ್ ಡಿ.ಸೋಜ, ಅಬ್ದುಲ್ಲ ಕುರೆಡ್ಕ, ಮಾಯಿಲ ನಾಯ್ಕ್, ರಸಾಕ್ ನಲ್ಕ, ಬಟ್ಯ, ಶಕೀರ್ ಜಮಾಲ್, ಶ್ರೀನಿವಾಸ್ ಶೆಣೈ, ದಿನೇಶ್ ಕುಕ್ಕಿಲ, ನಾರಾಯಣ ನಾಯ್ಕ್ ಮೊದಲಾದವರು ಭಾಗವಹಿಸಿದ್ದರು.